ಕಾರ್ಜುವಳ್ಳಿ ಮಠದಲ್ಲಿ 5ನೇ ಸ್ಮರಣೋತ್ಸವ 24ರಿಂದ 26ರ ವರೆಗೆ

 ಲಿಂಗೈಕ್ಯ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ
ಲಿಂಗೈಕ್ಯ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ
Published on
24ರಿಂದ 26ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ
ಆಲೂರು : ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಸಂಸ್ಥಾನ ಕಾರ್ಜುವಳ್ಳಿ ಹಿರೇಮಠದಲ್ಲಿ ಲಿಂಗೈಕ್ಯ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ 5ನೇ ಸ್ಮರಣೋತ್ಸವ ಮತ್ತು ಇಷ್ಟನಾಗ, ಸಿದ್ದಿನಾಗ, ಮುಕ್ತಿನಾಗ ದೇವರ ಪ್ರತಿಷ್ಠಾ ತೃತೀಯ ವಾರ್ಷಿಕೋತ್ಸವದ ಅಂಗವಾಗಿ ನ. 24ರಿಂದ ನ. 26ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಎಲ್ಲ ಕಾರ್ಯಗಳೂ ನೆರವೇರಲಿವೆ. ನ. 24ರ ಮಹಾಚೌತಿಯಂದು ಬೆಳಗ್ಗೆ 9ಕ್ಕೆ ಸ್ವಸ್ತಿ ಪುಣ್ಯಾಹವಾಚನ, ಮಹಾಸಂಕಲ್ಪ, ಗಂಗಾ, ಗೋಪೂಜೆ ನಂತರ ಚಂಡಿಕಾ ಸಪ್ತಶತಿ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ ಹಾಗೂ ಕುಂಕುಮಾರ್ಚನೆ ನಡೆಯಲಿದೆ. ಸಂಜೆ 6ಕ್ಕೆ ದ್ವಾದಶ ನಾರಿಕೇಳ ಗಣಹೋಮ, ದುರ್ಗಾಹೋಮ, ಶ್ರೀ ರುದ್ರ ಹೋಮ, ಭೂ-ವರಾಹ ಹೋಮ, ಪೂರ್ಣಾಹುತಿ ನೆರವೇರುತ್ತದೆ. 25ರಂದು ಬೆಳಗ್ಗೆ 9ಕ್ಕೆ ಸರ್ಪ ಸಂಸ್ಕಾರ, ತಿಲಹೋಮ, ಕೂಷ್ಮಾಂಡ ಹೊಮ ಹಮ್ಮಿಕೊಳ್ಳಲಾಗಿದೆ. ಲಿಂಗೈಕ್ಯ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ 5ನೇ ಸ್ಮರಣೋತ್ಸವ ನಿಮಿತ್ತ ಗದ್ದುಗೆಗೆ ಮಹಾಭಿಷೇಕ, ಕಿರೀಟ ಧಾರಣೆ, ಗಣಾರಾಧನೆ, ಸಂಜೆ 5ಕ್ಕೆ ಮಠದ ನಾಗದೇವರ ಸನ್ನಿಧಿಯಲ್ಲಿ ಬೆಳ್ಳಿಯ ನಾಗದೇವರ ಪ್ರತಿಷ್ಠೆ, ಪಂಚಾಮೃತಾಭಿಷೇಕ, ಪ್ರಸನ್ನ ಪೂಜೆ ಸಂಪನ್ನಗೊಳ್ಳಲಿದೆ. ರಾತ್ರಿ 7ಕ್ಕೆ ಇಷ್ಟನಾಗ, ಸಿದ್ದಿನಾಗ, ಮುಕ್ತಿನಾಗ ದೇವರುಗಳಿಗೆ ರಂಗಪೂಜೆ ನಡೆದು ತೀರ್ಥ ಪ್ರಸಾದ ವಿನಿಯೋಗವಿರುತ್ತದೆ. 26ರಂದು ಚಂಪಾಷಷ್ಠಿ,
ನಿಮಿತ್ತ ಬೆಳಗ್ಗೆ 9ರಿಂದ ನಾಗದೇವರಿಗೆ ಮಹಾಭಿಷೇಕ ಹಾಗೂ ಆಶ್ಲೇಷ ಬಲಿ ಪೂಜೆ, ಮಹಾಮಂಗಲ ನಿರಾಜನ, ತೀರ್ಥ ಪ್ರಸಾದ ವಿನಿಯೋಗವಿರಲಿದೆ. ಎಲ್ಲ ಸಮುದಾಯದವರೂ ಭಾಗವಹಿಸಲು ಮುಕ್ತ ಅವಕಾಶವಿದೆ. ಜಾತಕದಲ್ಲಿ ಸರ್ಪದೋಷ, ಸರ್ಪಶಾಪ, ಕಾಳಸರ್ಪದೋಷ, ಅಷ್ಟಮ ರಾಹು ಇದ್ದವರು
ಪೂಜೆಯಲ್ಲಿ ಭಾಗವಹಿಸಬಹುದು. 3 ದಿನವೂ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ ದಾಸೋಹ ಹಾಗೂ ಪೂಜೆಗಾಗಿ ಹೂವು, ಹಾಲು, ಹಣ್ಣು, ತುಪ್ಪ, ದಿನಸಿ ಇತ್ಯಾದಿ ಸುವಸ್ತುಗಳನ್ನು ಭಕ್ತರು ಸಮರ್ಪಿಸಬಹುದು ಎಂದು
ಮಠದ ಆಡಳಿತಾಧಿಕಾರಿ ಎಸ್. ಎಸ್ ಶಿವಮೂರ್ತಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net