ಸ್ಪೀಡ್ ಸ್ಕೇಟಿಂಗ್ ಆಲೂರಿನ ಶಿವರಂಜನ್‌ಗೆ ಬೆಳ್ಳಿ ಪದಕ

ಆಲೂರು ತಾಲೂಕು ಬಸವನಪುರ -ಹೊಸಪುರ ಗ್ರಾಮದ ಪ್ರೀತಿ, ಬಿ.ಕೆ. ಚನ್ನಕೇಶವ ಅವರ ಮಗ ಶಿವರಂಜನ್ ಅಂತಾರಾಷ್ಟ್ರೀಯ ರೋಲರ್ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಆಲೂರು ತಾಲೂಕು ಬಸವನಪುರ -ಹೊಸಪುರ ಗ್ರಾಮದ ಪ್ರೀತಿ, ಬಿ.ಕೆ. ಚನ್ನಕೇಶವ ಅವರ ಮಗ ಶಿವರಂಜನ್ ಅಂತಾರಾಷ್ಟ್ರೀಯ ರೋಲರ್ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • speed skating
ಆಲೂರು: ಇಂಡೋನೇಷಿಯಾದ ಜಕಾರ್ತಾದಲ್ಲಿ ಆಯೋಜನೆಗೊಂಡಿರುವ ಅಂತಾರಾಷ್ಟ್ರೀಯ ರೋಲರ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಆಲೂರು ತಾಲೂಕು ಬಸವನಪುರ -ಹೊಸಪುರ ಗ್ರಾಮದ ಪ್ರೀತಿ, ಬಿ.ಕೆ. ಚನ್ನಕೇಶವ ಅವರ ಮಗ ಶಿವರಂಜನ್ ದೇಶವನ್ನು ಪ್ರತಿನಿಧಿಸಿ ಸಾವಿರ ಮೀ. ಸ್ಪೀಡ್ ಸ್ಕೇಟಿಂಗ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.
ರಿಲೇ ಸ್ಪರ್ಧೆಯಲ್ಲಿ, 500 ಮೀ. ಸ್ಪೀಡ್ ಸ್ಕೇಟಿಂಗ್ ನಲ್ಲಿ ನಾಲ್ಕನೇ ಸ್ಥಾನ ಪಡೆದು ದೇಶದ ಗೌರವವನ್ನು ಹೆಚ್ಚಿಸಿದ್ದಾನೆ. ಇವರನ್ನು ಶಾಸಕ ಸಿಮೆಂಟ್ ಮಂಜು, ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ, ಜೆಡಿಎಸ್ ಅಧ್ಯಕ್ಷ ಕೆ.ಎಸ್. ಮಂಜೇಗೌಡ ಸೇರಿದಂತೆ ಮುಂತಾದವರು ಶುಭ ಹಾರೈಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net