ಅಸ್ಪಶ್ಯತೆ, ದಲಿತ ವಿರೋಧಿ ಮನಸ್ಥಿತಿ ಜೀವಂತ

ಉತ್ತರಾಖಂಡದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿದ ಘಟನೆ ಖಂಡಿಸಿ ಆಲೂರು ತಾಲೂಕಿನ ದಲಿತಪರ ಸಂಘಟನೆಯಿಂದ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ತಾಲೂಕು ದಂಡಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು.
ಉತ್ತರಾಖಂಡದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿದ ಘಟನೆ ಖಂಡಿಸಿ ಆಲೂರು ತಾಲೂಕಿನ ದಲಿತಪರ ಸಂಘಟನೆಯಿಂದ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ತಾಲೂಕು ದಂಡಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು.
Published on

ಆಲೂರು:

ಉತ್ತರಾಖಂಡದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿದ ಘಟನೆ ಖಂಡಿಸಿ ಆಲೂರು ತಾಲೂಕಿನ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಪಟ್ಟಣದ ಕೊನೆಪೇಟೆಯಿಂದ ಮಿನಿ ಆಡಳಿತ ಸೌಧದವರೆಗೂ ಮುಖ್ಯರಸ್ತೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಉತ್ತರಾಖಂಡ ಸರ್ಕಾರದ ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ದಂಡಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ದಲಿತ ಮುಖಂಡ ರವಿ ಕಾಜುರ್ವಳ್ಳಿ ಮಾತನಾಡಿ, ಉತ್ತರಾಖಂಡದ ಕಾರ್ಯಕ್ರಮವೊಂದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದು, ಅವರು ಕುಳಿತಿದ್ದ ವೇದಿಕೆಯನ್ನು ಮನುವಾದಿ ಸಂಘಟನೆಗಳು ಶುದ್ಧೀಕರಣಗೊಳಿಸಿರುವುದು ಖಂಡನೀಯ. ದೇಶದಲ್ಲಿ ಅಸ್ಪಶ್ಯತೆ ಹಾಗೂ ದಲಿತ ವಿರೋಧಿ ಮನಸ್ಥಿತಿ ಜೀವಂತವಾಗಿರುವುದು ಬೇಸರದ ಸಂಗತಿ ಎಂದರು.
ದಲಿತರು ಉನ್ನತ ಹುದ್ದೆಗಳನ್ನು ಅಲಂಕರಿಸಿದರೆ, ಸ್ಥಾನಮಾನ ಪಡೆದುಕೊಂಡರೆ ಮನುವಾದಿ ಮನಸ್ಥಿತಿಗಳು ಸಹಿಸುವುದಿಲ್ಲ ಎಂಬುದಕ್ಕೆ ಈ ಘಟನೆ ನಿದರ್ಶನ ಎಂದು ಆಕ್ರೊಶ ವ್ಯಕ್ತಪಡಿಸಿದರು.
ತಾಲೂಕು ದಲಿತ ಸಂಚಾಲಕ ಬಸವರಾಜು ಗೇಕರವಳ್ಳಿ ಮಾತನಾಡಿ, ಜಾತಿವಾದಿಗಳು ಜಾತಿ ತಾರತಮ್ಯ ಹಾಗೂ ಅಸ್ಪಶ್ಯತೆ ಆಚರಿಸುತ್ತಿರುವುದು ಶೋಚನೀಯ ಸಂಗತಿಯಾಗಿದ್ದು, ಸಂಬಂಧಪಟ್ಟವರ ವಿರುದ್ಧ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡರಾದ ಶಾಂತಕೃಷ್ಣ, ಟೀಕರಾಜು, ರಾಜಶೇಖರ್, ಶಿವಣ್ಣ ಅಂಬೇಡ್ಕರ್‌ನಗರ, ನಿವೃತ್ತ ಶಿಕ್ಷಕ ಎ.ಟಿ.ಮಲ್ಲೇಶ್, ತಾಲೂಕಿನ ಹಿರಿಯ ದಲಿತ ಮುಖಂಡರಾದ ರಂಗಯ್ಯ ಅಜೇನಹಳ್ಳಿ, ದೇವರಾಜು ಜೆ.ತಿಮ್ಮನಹಳ್ಳಿ, ಸುರೇಶ್ ಕೊಂಗಳ್ಳಿ, ಲೋಕೇಶ್ ಅಜೇನಹಳ್ಳಿ, ರವಿ ನಿಲುವಾಗಿಲು, ಲೋಹಿತ್ ಹಸಗನೂರು, ರಂಗನಾಥ್ ಬಸವೇಶ್ವರ, ಕಾಂತರಾಜ್ ಬ್ಯಾಬ, ನಂದೀಶ್ ಬ್ಯಾಬ, ಹರೀಶ್ ಭರತವಳ್ಳಿ, ಧರ್ಮಪ್ಪ ಬ್ಯಾಬ, ದೇವರಾಜ್ ಚಂದ್ರಶೇಖರ್ ತೊರಹಳ್ಳಿ, ಮಣಿಕಂಠಸ್ವಾಮಿ ಮುದಿಗೆರೆ, ಆನಂದ್ ತಿಮ್ಮನಹಳ್ಳಿ ಮತ್ತಿತರರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net