ನಿವೃತ್ತಿ ಹೊಂದಿದ ಕ್ಯಾಮನಹಳ್ಳಿ ಗ್ರಾಮದ ಶಿಕ್ಷಕಿ ತೀರ್ಥವತಿ ಅವರಿಗೆ ಗ್ರಾಮಸ್ಥರು ಬಿಳ್ಕೊಡುಗೆ ನೀಡಿ ಗೌರವಿಸಿದರು.
Published on:
Copied
Follow Us
ಸಕಲೇಶಪುರ:
ಜನರ ಪ್ರೀತಿಯ ಮುಂದೆ ಎಲ್ಲ ಪ್ರಶಸ್ತಿಗಳು ಗೌಣ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ ಹೇಳಿದರು.
ತಾಲೂಕಿನ ಕ್ಯಾಮನಹಳ್ಳಿ ಗ್ರಾಮದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕಿ ತೀರ್ಥವತಿ ಅವರಿಗೆ ಗ್ರಾಮಸ್ಥರು ಶುಕ್ರವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತೀರ್ಥವತಿ ಅವರ 32 ವರ್ಷದ ಸೇವಾ ಅವಧಿಯಲ್ಲಿ ಕ್ಯಾಮನಹಳ್ಳಿ ಗ್ರಾಮದಲ್ಲೇ 24 ವರ್ಷ ಪೊರೈಸಿರುವುದು ಗ್ರಾಮಸ್ಥರೊಂದಿಗೆ ಇವರಿಗೆ ಇದ್ದ ಅತ್ಮೀಯತೆ ಎತ್ತಿ ಹಿಡಿದಿದೆ. ಎಷ್ಟೇ ಪ್ರಮಾಣಿಕವಾಗಿ ಸೇವೆ ಸಲ್ಲಿಸಿದರೂ ಶಿಕ್ಷಕರು ಆರೋಪಮುಕ್ತವಾಗುವುದು ಕಷ್ಟ ಎಂದರು.
ಗ್ರಾಮಸ್ಥರೆಲ್ಲ ವಂತಿಖೇ ಸಂಗ್ರಹಿಸಿ ಶಾಲಾ ಅವರಣದಲ್ಲಿ ಸಿಹಿ ಊಟ ಸಿದ್ಧಪಡಿಸುವ ಮೂಲಕ ಹಬ್ಬದ ವಾತಾವಾರಣ ಸೃಷ್ಟಿಸಿದ್ದರು. ನಿವೃತ್ತ ಶಿಕ್ಷಕಿಗೆ ಹಾರ, ತುರಾಯಿ ಹಾಕಿ ಗೌರವಿಸಿದ್ದಲ್ಲದೆ, ಬೆಳ್ಳಿ ವಿಗ್ರಹ ಹಾಗೂ ಸೇವೆ ಸ್ಮರಣಿಕೆ ನೀಡಿ ಸನ್ಮಾನಿಸಿದರು.