ಐಇಇಇ ಬೆಂಗಳೂರು ವಿಭಾಗದ ಮುಖ್ಯಸ್ಥ ಡಾ.ಚನ್ನಿಗಪ್ಪ ಮುಂಜಂದಿರ ಮಾತನಾಡಿ, ರಾಜೀವ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಐಇಇಇ ವಿದ್ಯಾರ್ಥಿ ಘಟಕವನ್ನು ಸ್ಥಾಪಿಸಿ ಆ ಮೂಲಕ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರಬಂಧಗಳ ಮಂಡನೆಗೆ ಅವಕಾಶ ಕಲ್ಪಿಸಿಕೊಟ್ಟು, ತಮ್ಮ ಜ್ಞಾನ ವೃದ್ಧಿಯ ಜತೆಗೆ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಹೇಳಿದರು. ಸಮ್ಮೇಳನಕ್ಕೆ ಒಟ್ಟು 1,225 ಪ್ರಬಂಧಗಳು ಬಂದಿದ್ದು, ಇದರಲ್ಲಿ 505 ಪ್ರಬಂಧಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಆಯ್ದ ಕೆಲ ಪ್ರಬಂಧಗಳು ಅಂತಾರಾಷ್ಟ್ರೀಯ ನಿಯತಕಾಲಿಕಗಳಾದ ಸ್ಪ್ರಿಂಜರ್, ಅಪ್ಲೈಡ್ ಮ್ಯಾಥಮೆಟಿಕ್ಸ್, ಮಾಡಲಿಂಗ್ ಆ್ಯಂಡ್ ಸಿಮುಲೇಷನ್, ಕಾಂಪಿಟೇಷನ್ ಇಂಟಲಿಜೆನ್ಸ್ ಸಿಸ್ಟಮ್ ಮತ್ತು ರಿನೀವೆಬಲ್ ಎನರ್ಜಿ ರಿಸರ್ಚ್‌ನಲ್ಲಿ ಪ್ರಕಟಗೊಳ್ಳಲಿವೆ ಎಂದು ತಿಳಿಸಿದರು.