ಮಹಾಲಕ್ಷ್ಮೀ ಸ್ತೋತ್ರದಲ್ಲಿ ಬ್ರಹ್ಮಾಂಡದ ರಹಸ್ಯ ಅಡಕ

ಆದಿಹಳ್ಳಿ ಆದಿಚುಂಚನಗಿರಿ ಶಾಖಾ ಮಠದಲ್ಲಿ ಆದಿಲಕ್ಷ್ಮೀ ಅಮ್ಮನವರ ಜಾತ್ರಾ ಮಹೋತ್ಸವದ ಧಾರ್ಮಿಕ ಸಮಾರಂಭವನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು.ಅನಂತ್ ಕುಮಾರ್, ಮೇಟ್ರೋ ಬಾಬು, ರಘುಗೌಡ, ತಮ್ಮೇಗೌಡ, ಮೋಹನ್, ಆಗ್ರೋಬಾಬು, ಚಿಟ್ಟನಹಳ್ಳಿ ರಮೇಶ್, ಸಿದ್ದು ಇದ್ದರು.
ಆದಿಹಳ್ಳಿ ಆದಿಚುಂಚನಗಿರಿ ಶಾಖಾ ಮಠದಲ್ಲಿ ಆದಿಲಕ್ಷ್ಮೀ ಅಮ್ಮನವರ ಜಾತ್ರಾ ಮಹೋತ್ಸವದ ಧಾರ್ಮಿಕ ಸಮಾರಂಭವನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು.ಅನಂತ್ ಕುಮಾರ್, ಮೇಟ್ರೋ ಬಾಬು, ರಘುಗೌಡ, ತಮ್ಮೇಗೌಡ, ಮೋಹನ್, ಆಗ್ರೋಬಾಬು, ಚಿಟ್ಟನಹಳ್ಳಿ ರಮೇಶ್, ಸಿದ್ದು ಇದ್ದರು.
Published on
ಅರಸೀಕೆರೆ ಗ್ರಾಮಾಂತರ: ಸುಕ್ಷೇತ್ರ ತಾಲೂಕಿನ ಆದಿಹಳ್ಳಿ ಆದಿಚುಂಚನಗಿರಿ ಶಾಖಾ ಮಠದಲ್ಲಿ ಆದಿಲಕ್ಷ್ಮೀ ಅಮ್ಮನವರ ಜಾತ್ರಾ ಮಹೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಶನಿವಾರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.
ನಮಸ್ತೆ ಮಹಾಮಾಯೇ ಶ್ರೀಪೀಠ ಸುರ ಪೂಜಿತೆ, ಶಂಕಚಕ್ರ ಗದಾ ಹಸ್ತೆ ಮಹಾಲಕ್ಷ್ಮೀ ನಮೋಸ್ತುತೆ ಇದು ಮಹಾಲಕ್ಷ್ಮೀಯನ್ನು ಆರಾಧಿಸುವ ಶ್ಲೋಕ ಮಾತ್ರವಲ್ಲ. ಇದರಲ್ಲಿ ಬ್ರಹ್ಮಾಂಡದ ರಹಸ್ಯವೇ ಅಡಗಿದೆ. ಮಹಾಲಕ್ಷ್ಮೀ ದೇವಿಯು ಕೈಯಲ್ಲಿ ಹಿಡಿದಿರುವ ಶಂಖ, ಚಕ್ರ ಮತ್ತು ಗದೆ ಬ್ರಹ್ಮಾಂಡದ ಸೃಷ್ಟಿ-ಸ್ಥಿತಿ-ಲಯದ ಸಂಕೇತಗಳಾಗಿವೆ ಎಂದರು.
ಶಂಖದ ನಾದದಿಂದ ಹೊರಹೊಮ್ಮುವ ಶಬ್ದದಿಂದ ಬ್ರಹ್ಮಾಂಡ ಸೃಷ್ಟಿಯಾಗಿದ್ದರೆ ಚಲಿಸುತ್ತಿರುವ ಕಾಲವು ದೇವಿಯ ಕೈ ಬೆರಳಿನಲ್ಲಿ ತಿರುಗುತ್ತಿರುವ ಚಕ್ರವಾಗಿದೆ. ಅಧರ್ಮ ಹೆಚ್ಚಾದಾಗ ದೇವಿಯ ಮತ್ತೊಂದು ಕೈಯಲ್ಲಿರುವ ಗದೆಯು ದೇವಿಯ ಪ್ರಹಾರದ ಮೂಲಕ ಜಗತ್ತಿನಲ್ಲಿ ಧರ್ಮ ಸಂಸ್ಥಾಪನೆಯನ್ನು ಮಾಡಲಿದೆ ಎಂಬ ಸಂದೇಶ ಅಡಕವಾಗಿದೆ ಎಂದು ಹೇಳಿದರು.
ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಮಠದ ವತಿಯಿಂದ ಆದಿಹಳ್ಳಿ ಶಾಖಾ ಮಠದಲ್ಲಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಸಮ್ಮತಿ ನೀಡಿದ್ದು ಮೊದಲ ಹಂತವಾಗಿ ಒಂದು ಕೋಟಿ ರೂ.ಹೆಚ್ಚಿನ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಹೇಳಿದರು.
ತಾಲೂಕು ಒಕ್ಕಲಿಗರ ಸಮಾಜದ ಅಧ್ಯಕ್ಷ ಆರ್.ಅನಂತಕುಮಾರ್, ಆಲೂರು ತಾಲೂಕು ಒಕ್ಕಲಿಗರ ಸಮಾಜದ ಅಧ್ಯಕ್ಷ ಮೋಹನ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ, ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು, ಒಕ್ಕಲಿಗ ಸಮಾಜದ ಮುಖಂಡರಾದ ತಮ್ಮೇಗೌಡ, ಆದಿಚುಂಚನಗಿರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಲಿಂಗರಾಜು, ದೈಹಿಕ ಶಿಕ್ಷಣ ಶಿಕ್ಷಕ ನಾಗೇಶ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net