ದೇವರ ಪಾದ ಸ್ಪರ್ಶಿಸಿ ಕೃತಾರ್ಥರಾದ ಭಕ್ತಕೋಟಿ

ಆಷಾಢ ವೈಕುಂಠ ಏಕಾದಶಿ ಅಂಗವಾಗಿ ಪಟ್ಟಣದ ಶ್ರೀ ರುಕ್ಮಿಣಿ ಪಾಂಡುರಂಗಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಾವಸಾರ ಕ್ಷತ್ರಿಯ ಸಮಾಜದ ಮುಖಂಡರು, ಭಕ್ತರು ಪಾಲ್ಗೊಂಡಿದ್ದರು.
ಆಷಾಢ ವೈಕುಂಠ ಏಕಾದಶಿ ಅಂಗವಾಗಿ ಪಟ್ಟಣದ ಶ್ರೀ ರುಕ್ಮಿಣಿ ಪಾಂಡುರಂಗಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಾವಸಾರ ಕ್ಷತ್ರಿಯ ಸಮಾಜದ ಮುಖಂಡರು, ಭಕ್ತರು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • devotees felt
ಬೇಲೂರು: ಆಷಾಢ ವೈಕುಂಠ ಏಕಾದಶಿ ಅಂಗವಾಗಿ ಪಟ್ಟಣದ ಶ್ರೀ ರುಕ್ಮಿಣಿ ಪಾಂಡುರಂಗಸ್ವಾಮಿ ದೇವಾಲಯದಲ್ಲಿ ಶನಿವಾರ ವಿಶೇಷ ಪೂಜೆ, ಧಾರ್ಮಿಕ ವಿಧಿ ವಿಧಾನಗಳು ಹಾಗೂ ಭಕ್ತರಿಗೆ ಗರ್ಭಗುಡಿ ಪ್ರವೇಶ ಮತ್ತು ದೇವರ ಪಾದಸ್ಪರ್ಶಿಸಲು ಅವಕಾಶ ಕಲ್ಪಿಸಲಾಗಿತ್ತು.
ಬೆಳಗ್ಗೆಯಿಂದಲೇ ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಗರ್ಭಗುಡಿ ಪ್ರವೇಶಿಸಿ ದೇವರ ಪಾದಸ್ಪರ್ಶ ಮಾಡಿ ಕೃತಾರ್ಥರಾದರು.
ಭಾವಸಾರ ಕ್ಷತ್ರಿಯ ಸಮಾಜದ ತಾಲೂಕು ಅಧ್ಯಕ್ಷ ಭಗವಂತ ರಾವ್ ಮಾತನಾಡಿ, ಮಹಾರಾಷ್ಟ್ರದ ಪಂಢರಾಪುರದಲ್ಲಿ ಭಕ್ತರಿಗೆ ಪಾಂಡುರಂಗನ ಪಾದಸ್ಪರ್ಶಕ್ಕೆ ಅವಕಾಶ ನೀಡುವ ಸಂಪ್ರದಾಯದಂತೆ ಬೇಲೂರಿನಲ್ಲೂ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ಅಪರೂಪದ ಸೇವೆಯಲ್ಲಿ ಭಾಗವಹಿಸಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ವೈಕುಂಠ ಏಕಾದಶಿಯ ಮಹತ್ವವನ್ನು ಸಾರ್ಥಕಗೊಳಿಸಿದ್ದಾರೆ ಎಂದರು.
ನೂರಾರು ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಭವಸಾರ ಕ್ಷತ್ರಿಯ ಸಮಾಜದ ಗೌರವಾಧ್ಯಕ್ಷ ಆನಂದ್ ಚಿಂಬಾಳ್ಕರ್, ಉಪಾಧ್ಯಕ್ಷ ಮಂಜುನಾಥ್ ಇರಾಸ್ಕರ್, ಕಾರ್ಯದರ್ಶಿ ಗಣೇಶ್ ಪೋಕಳೆ, ಖಜಾಂಚಿ ಗಣೇಶ್ ಚಿಂಬಾಳ್ಕರ್, ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ದೀಪಕ್, ಕಾರ್ಯಕಾರಿ ಮಂಡಳಿ ಸದಸ್ಯರು, ಮಹಿಳಾ ಮಂಡಳಿ ಸದಸ್ಯರು, ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net