ನಾಯಿ ಎಳೆದೊಯ್ದ ಚಿರತೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಹೊಳೆನರಸೀಪುರ: ತಾಲೂಕಿನ ಹಳೆಕುಂಚೇವು ಗ್ರಾಮದಲ್ಲಿ ಸಾಕು ನಾಯಿಯೊಂದನ್ನು ಭಾನುವಾರ ರಾತ್ರಿ ಚಿರತೆ ಎಳೆದೊಯ್ದ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.
ಗ್ರಾಮದ ಅಕ್ಕಿ ವ್ಯಾಪಾರಿ ರಾಜಣ್ಣ ಅವರ ಮನೆಯ ಅಂಗಳದಲ್ಲಿ ಕಟ್ಟಿದ್ದ ಗ್ರಾಮದ ನಾಯಿ ಚಿರತೆ ದಾಳಿಗೆ ಬಳಿಯಾಗಿದೆ. ಗ್ರಾಮದ ಆಸುಪಾಸಿನಲ್ಲಿ ಚಿರತೆ ಉಪಟಳವಿತ್ತು. ಇದೀಗ ಗ್ರಾಮದ ಒಗಳ ಸಂಚರಿಸುತ್ತಿರುವುದು
ದೃಢಪಟ್ಟಿರುವುದರಿಂದ ಜನರು ಭಯಭೀತರಾಗಿದ್ದು, ಕೂಡಲೇ ಅರಣ್ಯ ಇಲಾಖೆ ಚಿರತೆ ಸೆರೆಗೆ ಕ್ರಮ ವಹಿಸುವಂತೆ ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net