ಶೋಭಾಯಾತ್ರೆ ಬಾಗೂರು ರಸ್ತೆಯ ಮೂಲಕ ಕೋಟೆ ಬಡಾವಣೆಯಲ್ಲಿ ಸಾಗಿ ಹೊಸ ಬಸ್‌ನಿಲ್ದಾಣದ ಮೂಲಕ ನವೋದಯ ವೃತ್ತ, ಮೈಸೂರು ರಸ್ತೆ, ಸಾರ್ವಜನಿಕ ಆಸ್ಪತ್ರೆ ರಸ್ತೆ ಮೂಲಕ ಬಿ.ಎಂ.ರಸ್ತೆಯಲ್ಲಿನ ಕೆ.ಆರ್.ವೃತ್ತದಲ್ಲಿ ಅಂತ್ಯಗೊಳ್ಳಲಿದೆ. ಹಲವು ಕಲಾತಂಡಗಳು, ಕೇರಳದ ಚಂಡೆವಾದ್ಯ, ಹನುಮಾನ್ ಟ್ಯಾಬ್ಲೋ ಸೇರಿದಂತೆ ಪ್ರತಿ ಹೋಬಳಿಗೊಂದರಂತೆ ಪ್ರಮುಖ ಉತ್ಸವಮೂರ್ತಿಗಳನ್ನು ಮೆರವಣಿಗೆ ನಡೆಸಲಾಗುವುದು ಎಂದರು.