ಮನೆಗೊಂದು ಗ್ರಂಥಾಲಯ ಜಾಗೃತಿ ಸಮಿತಿಯ ಕರಪತ್ರ ಪ್ರದರ್ಶಿಸಲಾಯಿತು. ಲೇಖಕರಾದ ಬಾರಸು ದಂಪತಿಯನ್ನು ಪುಸ್ತಕ ಪ್ರಾಧಿಕಾರದಿಂದ ಅಭಿನಂದಿಸಲಾಯಿತು . ಪ್ರಾಧಿಕಾರದ ಸದಸ್ಯರಾದ ಡಾ. ಕುಶಲ್ ಬರಗೂರು ಅವರನ್ನು ಲೇಖಕರು ಸನ್ಮಾನಿಸಿದರು ಹಿರಿಯ ಲೇಖಕ ಕುಮಾರ್ ಚಲವಾದಿ, ವಾಸವಾಂಬ ಬ್ಯಾಂಕ್ ಮಾಜಿ ಅಧ್ಯಕ್ಷ ರವಿಕುಮಾರ್, ಪತಂಜಲಿ ವಾಸುದೇವಮೂರ್ತಿ, ಪತ್ರಕರ್ತರಾದ ಎಚ್.ಬಿ.ವೆಂಕಟೇಶ್, ಪತ್ರಕರ್ತ ವಿಶ್ವನಾಥ್ ನರಸಿಂಹಮೂರ್ತಿ, ಮಹಮದ್ ನಾಸಿರ್, ಸ್ವರೂಪ್ ಇತರರು ಇದ್ದರು.