ತಾಲೂಕಿನ ಬಿಕ್ಕೋಡು ಸಮೀಪದ ಜಗಬೋರನಹಳ್ಳಿ ಅರಣ್ಯ ಪ್ರದೇಶದಲ್ಲಿ ಬೀಡು ಬಿಡುತ್ತಿದ್ದ ಕಾಡಾನೆಗಳು ಸಂಜೆಯಾಗುತ್ತಿದ್ದಂತೆಯೇ ಅಕ್ಕಪಕ್ಕದ ಗ್ರಾಮಗಳ ಜಮೀನುಗಳತ್ತ ನುಗ್ಗಿ ಬೆಳೆನಾಶಪಡಿಸುತ್ತಿದ್ದವು. 20ಕ್ಕೂ ಹೆಚ್ಚು ಕಾಡಾನೆಗಳು ಕಳೆದ ಕೆಲ ತಿಂಗಳಿಂದ ಬಿಕ್ಕೋಡು ಸಮೀಪದ ಚಿಕ್ಕಬಿಕ್ಕೋಡು, ಮತ್ತಾವರ, ನಿಡುಮನಹಳ್ಳಿ, ಜಗಬೋರನಹಳ್ಳಿ, ಕೋಗಿಲಮನೆ, ಬೊಮ್ಮಡಿಹಳ್ಳಿ, ಕುಶಾವರ, ಮೊಗಸಾವರ, ಚೌಡನಹಳ್ಳಿ ಹಾಗೂ ಕಸಬಾ ಹೋಬಳಿಯ ಕೊತ್ತನಹಳ್ಳಿ, ಹಿರಿಕೊಲೆ, ಚಿಕ್ಕೋಲೆ, ತಗರೆ ಗ್ರಾಮಗಳ ಜಮೀನುಗಳಿಗೆ ದಾಳಿ ಇಟ್ಟು ನೂರಾರು ಎಕರೆಯಲ್ಲಿ ಹುಲುಸಾಗಿ ಬೆಳೆದಿದ್ದ ಜೋಳ, ಭತ್ತ, ರಾಗಿ ಬೆಳೆ ತಿಂದು ನಾಶಪಡಿಸಿವೆ.