2028ರೊಳಗೆ 8 ಏತ ನೀರಾವರಿ ಯೋಜನೆ ಪೂರ್ಣ

ಆಲೂರು ತಾಲೂಕಿನ ಕಸಬಾ ಹೋಬಳಿ ಹುಣಸವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲೂರು - ಯಡೂರು ಸಂಪರ್ಕ ರಸ್ತೆ ಕಾಮಗಾರಿಗೆ ಶಾಸಕ ಸಿಮೆಂಟ್ ಮಂಜು ಭೂಮಿ ಪೂಜೆ ನೆರವೇರಿಸಿದರು.  ಕೃಷ್ಣಮೂರ್ತಿ ಅಬ್ಬನ , ಮೋಹನ್ ಮಾವನೂರು ಇದ್ದರು.
ಆಲೂರು ತಾಲೂಕಿನ ಕಸಬಾ ಹೋಬಳಿ ಹುಣಸವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲೂರು - ಯಡೂರು ಸಂಪರ್ಕ ರಸ್ತೆ ಕಾಮಗಾರಿಗೆ ಶಾಸಕ ಸಿಮೆಂಟ್ ಮಂಜು ಭೂಮಿ ಪೂಜೆ ನೆರವೇರಿಸಿದರು. ಕೃಷ್ಣಮೂರ್ತಿ ಅಬ್ಬನ , ಮೋಹನ್ ಮಾವನೂರು ಇದ್ದರು.
Published on
ಆಲೂರು: ಸಕಲೇಶಪುರ ಕ್ಷೇತ್ರದ ಮಾಜಿ ಶಾಸಕರಾಗಿದ್ದ ದಿವಂಗತ.ಬಿ ಶಿವಪ್ಪ ಅವರ ಕಾಲದಿಂದಲೂ ನಮ್ಮ ಪಕ್ಷಕ್ಕೆ ಶಕ್ತಿಯನ್ನು ನೀಡುತ್ತಾ ಬಂದಿರುವ ಯಡೂರು ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಈ ಗ್ರಾಮದ ಋಣವನ್ನು ತೀರಿಸುವ ಜವಾಬ್ದಾರಿ ನನ್ನ ಮೇಲೆ ಇದೆ ಎಂದು ಶಾಸಕ ಸಿಮೆಂಟ್ ಮಂಜು ಅಭಿಪ್ರಾಯಪಟ್ಟರು.
ತಾಲೂಕಿನ ಕಸಬಾ ಹೋಬಳಿ ಹುಣಸವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲೂರು ಮುಖ್ಯ ರಸ್ತೆಯಿಂದ ಯಡೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸುಮಾರು 1.6 ಕಿ.ಮೀ ರಸ್ತೆ ಪೈಕಿ 900 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಈ ಗ್ರಾಮದ ಹಲವು ವರ್ಷಗಳ ಬೇಡಿಕೆಯಾದ ರಸ್ತೆ ಕಾಮಗಾರಿಗೆ ನಾನು ಶಾಸಕನಾಗಿ ಆಯ್ಕೆಯಾದ ಪ್ರಾರಂಭದಲ್ಲಿಯೇ 48 ಲಕ್ಷ ರೂ.ಗಳ ಅನುದಾನವನ್ನು 2024-25 ನೇ ಸಾಲಿನಲ್ಲಿಯೇ ಮೀಸಲಿಟ್ಟಿದ್ದೆ. ಆದರೆ ಅಂದಾಜು ಪಟ್ಟಿ ಸಿದ್ಧಪಡಿಸಿ ಟೆಂಡರ್ ಪ್ರಕ್ರಿಯೆ ನಡೆಯುವಾಗ ವಿಳಂಬವಾಗಿದ್ದರಿಂದ ಇಂದು ಭೂಮಿಪೂಜೆ ನೆರವೇರಿಸಲಾಗಿದೆ. ಇನ್ನು ಉಳಿದ 700 ಮೀಟರ್ ಉದ್ದದ ರಸ್ತೆಯನ್ನು ಮುಂದಿನ ಅನುದಾನದಲ್ಲಿ ಪೂರ್ಣಗೊಳಿಸುವ ಮೂಲಕ ಈ ಗ್ರಾಮದ ಋಣವನ್ನು ತೀರಿಸುವ ಭರವಸೆ ನೀಡಿದರು.
ನಮ್ಮ ತಾಲೂಕಿನಲ್ಲಿ 8 ಏತನಿರಾವರಿ ಯೋಜನೆಗಳು ಸ್ಥಗಿತಗೊಂಡಿದ್ದು ನನ್ನ ಅವಧಿ ಮುಗಿಯುವ ಒಳಗಾಗಿ ಅವುಗಳಿಗೆ ಚಾಲನೆ ನೀಡಲಾಗುವುದು ಅಲ್ಲದೆ ನಮ್ಮ ಆಲೂರು ತಾಲೂಕಿನಲ್ಲಿ ಯಗಚಿ ಮತ್ತು ವಾಟೆಹೊಳೆ ಜಲಾಶಯದ ಚಾನಲ್‌ಗಳು ಹಾದು ಹೋಗಿದ್ದು ಆ ಚಾನಲ್‌ಗಳಲ್ಲಿ ಪ್ರಾರಂಭದಿಂದ ಹಿಡಿದು ಕೊನೆಯವರೆಗೂ ನೀರನ್ನು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಆಗ ಮಾತ್ರ ನಾನು ಶಾಸಕನಾಗಿರುವುದಕ್ಕೆ ಸಾರ್ಥಕವಾಗುತ್ತದೆ ಎಂದರು.
ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಅಬ್ಬನ , ಬಿಜೆಪಿ ವಕ್ತಾರ ಮೋಹನ್ ಮಾವನೂರು, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಗಣೇಶ್, ಪುರೋಹಿತ ಗಂಗಾಧರ್, ಬಿಜೆಪಿ ಉಪಾಧ್ಯಕ್ಷ ನಂಜುಂಡಪ್ಪ, ಕಸಬಾ ಅಧ್ಯಕ್ಷ ಕಿರಣ್, ಯಡೂರು ಬೂತ್ ಅಧ್ಯಕ್ಷ ಅಶೋಕ್, ಯಡೂರು ಗ್ರಾಮದ ಹಿರಿಯ ಮುಖಂಡರಾದ ವೈ.ಬಿ ಟೀಕರಾಜು, ಶಂಕ್ರಪ್ಪ ಪುಟ್ಟಸ್ವಾಮಿ, ಲಿಂಗರಾಜು, ರವಿ ಭಾನುಪ್ರಕಾಶ್, ದಿನೇಶ್ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net