ಜಿಲ್ಲೆಯ 42 ನ್ಯಾಯಾಲಯಗಳ 95,402 ಪ್ರಕರಣಗಳ ಪೈಕಿ, ರಾಷ್ಟ್ರೀಯ ಲೋಕ ಅದಾಲತ್‌ಗಾಗಿ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ 7,998 ಪ್ರಕರಣಗಳು ಹಾಗೂ 6,21,730 ವ್ಯಾಜ್ಯಪೂರ್ವ ಪ್ರಕರಣಗಳನ್ನು ಗುರುತಿಸಲಾಗಿತ್ತು. ಇದರಲ್ಲಿ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ 4,262 ಪ್ರಕರಣಗಳು ಹಾಗೂ 6,14,318 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಲೋಕ ಅದಾಲತ್‌ನಲ್ಲಿ 73 ಬಗೆಹರಿಸಬಹುದಾದ ಕ್ರಿಮಿನಲ್ ಪ್ರಕರಣಗಳು, 285 ಚೆಕ್ ಬೌನ್ಸ್‌ಪ್ರಕರಣಗಳು, 142 ಬ್ಯಾಂಕ್ ರಿಕವರಿ ಪ್ರಕರಣಗಳು, 54 ವಿದ್ಯುತ್ ಕಾಯ್ದೆಯ ಪ್ರಕರಣಗಳು, 36 ಭೂಸ್ವಾೀನ ಪ್ರಕರಣಗಳು, 250 ಮೋಟರ್ ವಾಹನ ಪರಿಹಾರ ಪ್ರಕರಣಗಳು, 53 ಕೌಟುಂಬಿಕ ಪ್ರಕರಣಗಳು, 496 ಇತರ ಸಿವಿಲ್ ಪ್ರಕರಣಗಳು, 2,222 ಇತರ ಕ್ರಿಮಿನಲ್ ಪ್ರಕರಣಗಳು, ಆರು ಕಾರ್ಮಿಕ ಪ್ರಕರಣಗಳು, 645 ಜನನ ನೋಂದಣಿ ಪ್ರಕರಣಗಳು ಎಲ್ಲವೂ ಸೇರಿ ಒಟ್ಟು 4,262 ನ್ಯಾಯಾಲಯದ ಪ್ರಕರಣಗಳಾಗಿವೆ ಎಂದು ತಿಳಿಸಿದರು.