

ಚನ್ನರಾಯಪಟ್ಟಣ:
ಕುಡಿಯುವ ನೀರು ಒದಗಿಸುವ ದೃಷ್ಟಿಯಿಂದ ಹೇಮಾವತಿ ನದಿಯಿಂದ ನೀರನ್ನು ಎತ್ತಿ ತಾಲೂಕಿನ ಆನೆಕೆರೆ ಗ್ರಾಮದ ಶಂಭುಲಿಂಗ ದೇವರ ಕೆರೆ ತುಂಬಿಸುವ ಯೋಜನೆಗೆ ಭೂಮಿ ನೀಡಿದ್ದ 152 ರೈತರಿಗೆ 7.3 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಂದಿಹಳ್ಳಿ ಗಿರೀಶ್ ಮಾಹಿತಿ ನೀಡಿದರು.