ಅಪರಿಚಿತ ವ್ಯಕ್ತಿಯ ಕೊಲೆ ಕೇಸ್​ ಭೇದಿಸಿದ ಹಾಸನ ಪೊಲೀಸರು: ಅಪ್ರಾಪ್ತನೇ ಆರೋಪಿ, ಕಾರಣ ಶಾಕ್​ ಆಗುವಂತಿದೆ

Hsn Case
Published on

ಹಾಸನ: ಕೊಲೆ ಮಾಡಿ ವ್ಯಕ್ತಿಯ ಗುರುತು ಸಿಗದಂತೆ ಪೆಟ್ರೋಲ್​ ಸುರಿದು ಸುಟ್ಟು ಹಾಕಿದ್ದ ಪ್ರಕರಣವನ್ನು ಹಾಸನ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆಯಾದ ವ್ಯಕ್ತಿಯನ್ನು ಅರಸೀಕೆರೆ ಕಣಕಟ್ಟೆ ಮೂಲದ ಸುಮೇಶ್ (30) ಎಂದು ಗುರುತಿಸಲಾಗಿದೆ. ಕೊಲೆಯಲ್ಲಿ ಅಪ್ರಾಪ್ತರು ಭಾಗಿಯಾಗಿರುವ ಕಾರಣ ಹೆಚ್ಚಿನ ವಿಚಾರವನ್ನು ಪ್ರಸ್ತಾಪ ಮಾಡುವಂತಿಲ್ಲ ಎಂದು ಹಾಸನ ಎಸ್ಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.

ಕೊಲೆಯಾದ ವ್ಯಕ್ತಿ ಬಾಲಕನ ಜೊತೆ ಆತನ ತಾಯಿ ಬಗ್ಗೆ ಅನುಚಿತವಾಗಿ ಮಾತನಾಡಿದಕ್ಕೆ ಕೊಲೆ ಮಾಡಿದ್ದಾರೆನ್ನಲಾಗಿದೆ. ದೊಣ್ಣೆಯಲ್ಲಿ ಹೊಡೆದು ಸಾಯಿಸಿದ ಬಳಿಕ ಪೆಟ್ರೋಲ್ ಸುರಿದು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.

ಕುಡಿಯೋ ನೆಪದಲ್ಲಿ ಕರೆದೊಯ್ದು ಕೊಲೆ ಮಾಡಿದ್ದಾರೆ. ಜೂನ್ 12 ರಂದು ಕೊಲೆ ನಡೆದಿದೆ. ಮೃತ ವ್ಯಕ್ತಿಯು ಅನುಚಿತವಾಗಿ ವರ್ತಿಸುತ್ತಿದ್ದ ಅನ್ನೊದು ತಿಳಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net