ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ ಪೆನ್ ಡ್ರೈವ್ ಹಂಚಿದವರ ವಿರುದ್ಧ ಕ್ರಮಕ್ಕೆ ದೂರು

Prajwal Revanna
Published on

ರಾಮನಗರ: ಹಾಸನದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದೌರ್ಜನ್ಯ ನಡೆದಿರುವ ವಿಡಿಯೋಗಳನ್ನು ಹಾಗೂ ಚಿತ್ರಗಳನ್ನು ಪೆನ್‌ಡ್ರೈವ್‌ಗೆ ತುಂಬಿಸಿ ಮನೆ ಮನೆಗೆ ಹಂಚುವ ಮೂಲಕ ಮಹಿಳೆಯರ ಮಾನ ಕಳೆದ ವ್ಯಕ್ತಿಗಳ ವಿರುದ್ಧ ಪ್ರಕರಣದ ದಾಖಲು ಮಾಡಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿಶೇಷ ತನಿಖಾ ತಂಡಕ್ಕೆ ನೋಂದಾಯಿತ ಅಂಚೆ ಮೂಲಕ ದೂರು ಸಲ್ಲಿಸಿದ್ದಾರೆ.

ಈ ಸಂಬಂಧ ಎಸ್‌ಐಟಿಯ ಮುಖ್ಯಸ್ಥ ಬಿ.ಕೆ. ಸಿಂಗ್ ಅವರಿಗೆ ಪತ್ರ ಬರೆದು ರಿಜಿಸ್ಟ್‌ರ್ ಪೋಸ್ಟ್ ಮಾಡಿರುವ ದಿನೇಶ್, ದೌರ್ಜನ್ಯದ ವಿಡಿಯೋಗಳನ್ನು ಪೆನ್‌ಡ್ರೈವ್‌ಗೆ ತುಂಬಿಸಿ ಮನೆ ಮನೆ ಹಂಚಿ ಮಹಿಳೆಯರ ಮಾನ ಕಳೆದಿರುವುದರ ಹಿಂದೆ ರಾಜಕೀಯ ಲಾಭ ಪಡೆದುಕೊಳ್ಳುವ ಶಂಕೆ ಇದೆ.

ಈ ಹಿನ್ನೆಲೆಯಲ್ಲಿ ಪೆನ್ ಡ್ರೈವ್ ಹಂಚಿಕೆ ಮಾಡದ ವ್ಯಕ್ತಿಗಳ ವಿರುದ್ಧ ಅಶ್ಲೀಲ ಚಿತ್ರ ಹೊಂದಿ ಅದನ್ನು ನೋಡಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆ 1860 ಸೆಕ್ಷನ್ 228 (ಎ)(1), 292, ಮಾಹಿತಿ ತಂತ್ರಜ್ಞಾನ ಕಾಯ್ದೆ 2000, ಮಾಹಿತಿ ತಿದ್ದುಪಡಿ ಕಾಯ್ದೆ 2008ರ ಸೆಕ್ಷನ್ 67, 67-ಎ ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಬೇಕು ಹಾಗೂ ಮಹಿಳೆಯರನ್ನು ಅತ್ಯಂತ ಕೀಳು ಮಟ್ಟದಲ್ಲಿ ನೋಡಿದ್ದಕ್ಕಾಗಿ ಮತ್ತು ಪ್ರತಿಬಿಂಬಿಸಿದ್ದಕ್ಕಾಗಿ ಭಾರತೀಯ ಮಹಿಳಾ ಪ್ರತಿನಿಧಿ (ತಿದ್ದುಪಡಿ) ಕಾಯ್ದೆ 1986ರ ಅಡಿಯಲ್ಲಿ ಪೆನ್ ಡ್ರೈವ್ ಹಂಚಿಕೆ ಮಾಡಿದವರ ವಿರುದ್ಧ ಪ್ರಕರಣ ದಾಖಲು ಮಾಡಿ ತನಿಖೆ ನಡೆಸುವಂತೆ ದಿನೇಶ್ ಕಲ್ಲಹಳ್ಳಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net