ಸಕಲೇಶಪುರಕ್ಕೆ ಪ್ರವಾಸಿಗರ ದಂಡು

10 skpp 1
Published on

ಸಕಲೇಶಪುರ: ನಿರಂತರ 48 ದಿನಗಳ ಲಾಕ್‌ಡೌನ್ ತೆರವಾದ ಬಳಿಕ ತಾಲೂಕಿಗೆ ಪ್ರವಾಸಿಗರು ಬರುತ್ತಿದ್ದಾರೆ.
ಕರೊನಾ ಭಯದ ನೆರಳಿನಲ್ಲೇ ಹೋಮ್‌ಸ್ಟೇ, ರೆಸಾರ್ಟ್‌ಗಳು ಆರಂಭವಾಗಿವೆ. ಪ್ರವಾಸಿ ಸ್ಥಳಗಳಾದ ಮಂಜ್ರಾಬಾದ್ ಕೋಟೆ, ಜಲಪಾತಗಳ ವೀಕ್ಷಣೆಗೆ ನಿತ್ಯ ನೂರಾರು ಜನರು ಆಗಮಿಸುತ್ತಿದ್ದಾರೆ. ತಾಲೂಕಿನಲ್ಲಿ ಮುಂಗಾರು ಮಳೆ ಸಕಾಲದಲ್ಲಿ ಬಿದ್ದಿರುವ ಕಾರಣ ಜಲಪಾತಗಳಲ್ಲಿ ಹೆಚ್ಚಿನ ನೀರಿನ ಹರಿವಿದ್ದರೆ, ಬೆಟ್ಟಗುಡ್ಡಗಳು ಹಸಿರಿನಿಂದ ಕಂಗೊಳಿಸುತ್ತಿರುವುದರಿಂದ ಎರಡು ತಿಂಗಳಿನಿಂದ ಮನೆಯಲ್ಲಿ ಕುಳಿತು ಮಂಕು ಹಿಡಿದಿದ್ದ ಜನರಿಗೆ ತಾಲೂಕಿನ ಪ್ರಕೃತಿ ಸೌಂದರ್ಯ ಮುದ ನೀಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net