ಪರ್ಮಿಟ್ ಇಲ್ಲ, ತೆರಿಗೆ ಪಾವತಿಸಿಲ್ಲ: ಆದ್ರೂ ರಾಜಾರೋಷವಾಗಿ ಓಡಾಡಿಕೊಂಡಿದ್ದ ಬಸ್ ಗತಿ ಏನಾಯ್ತು?​

26HSN7
Published on

ಹಾಸನ: ನಕಲಿ ನಂಬರ್ ಪ್ಲೇಟ್ ಬಳಸಿ ಚಲಾಯಿಸುತ್ತಿದ್ದ ಖಾಸಗಿ ಬಸ್ ಅನ್ನು ಆರ್‌ಟಿಒ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದ್ದಾರೆ.

ಕೆಎ 01ಸಿ 4932ರ ಬದಲಿಗೆ ಕೆಎ 01 ಎಬಿ 3798 ಎಂಬ ನಂಬರ್ ಪ್ಲೇಟ್ ಹೊಂದಿದ್ದ ಬಸ್ ಅನ್ನು ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದಲ್ಲಿ ಮೊಟಾರು ವಾಹನ ನಿರೀಕ್ಷಕ ಪಿ.ಆರ್. ಯಶವಂತಕುಮಾರ್ ಹಾಗೂ ತಂಡ ಗುರುತಿಸಿದೆ. ಯಾವುದೇ ದಾಖಲೆಗಳಿಲ್ಲದೆ, ಪರ್ಮಿಟ್ ಇಲ್ಲದೆ ಹಾಗೂ ತೆರಿಗೆ ಪಾವತಿಸದೆ ಬಸ್ ಓಡಾಡುತ್ತಿರುವುದು ತಿಳಿದು ಬಂದಿದೆ.

ಎನ್.ಎ. ಟೂರ್ಸ್‌ ಅಂಡ್ ಟ್ರಾವೆಲ್ಸ್‌ಗೆ ಸೇರಿ ಬಸ್ ಇದಾಗಿದ್ದು ಧರ್ಮಸ್ಥಳದಿಂದ ಬೆಂಗಳೂರಿಗೆ ತೆರಳುತ್ತಿತ್ತು. ಬಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆದಿರುವ ಆರ್‌ಟಿಒ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net