ಚಿತ್ರದುರ್ಗದಲ್ಲಿ ಕೊಲೆ, ಹಾಸನದಲ್ಲಿ ಶವ ಪತ್ತೆ: ಪತ್ನಿ ಕೊಂದ ಪತಿಯ ಭಯಾನಕ ಸಂಚು ಬಯಲು!

Hassan Woman
ಕೊಲೆಯಾದ ಸುಷ್ಮಿತಾ. ಕೊಲೆ ಆರೋಪಿ ನಾಗರಾಜು ಜತೆ ಆತನ ಪ್ರೇಯಸಿ ಶೈಲಾ.
Published on

ಹಾಸನ: ಪರಸ್ತ್ರಿ ಸಹವಾಸಕ್ಕಾಗಿ ತಾಳಿ ಕಟ್ಟಿದ ಪತ್ನಿಯನ್ನೇ ಕೊಲೆ ಮಾಡಿದ ದುಷ್ಟನೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಸುಷ್ಮಿತ ಕೊಲೆಯಾದ ದುರ್ದೈವಿ. ನಾಗರಾಜ್ (28) ಬಂಧಿತ ಆರೋಪಿ ಪತಿ. ಕೊಲೆಗೆ ಸಹಕರಿಸಿದ ಪ್ರೇಯಸಿ ಶೈಲಾ (27) ಮತ್ತು ಮೋಹನ್​ (24) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 01ರಂದು ಸುಷ್ಮಿತಾಳ ಶವ ಹಾಸನದ ದುದ್ದ ಚೀರನಹಳ್ಳಿ ಕೆರೆಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಮಹಿಳೆಯ ಗುರುತು ಪತ್ತೆಯಾಗಿರಲಿಲ್ಲ. ಅಪರಿಚಿತ ಶವದ ಗುರುತು ಬೆನ್ನತ್ತಿದ ದುದ್ದ ಪೊಲೀಸರು ಇಡೀ ಪ್ರಕರಣವನ್ನೇ ಭೇದಿಸಿದ್ದಾರೆ.

ಆತಂಕಕಾರಿ ವಿಚಾರವೆಂದರೆ ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಬೆಲಗೂರಿನಲ್ಲಿ ಸುಷ್ಮಿತಾಳನ್ನು ಕೊಲೆ ಮಾಡಿದ್ದ ನಾಗರಾಜ್, ಪತ್ನಿಯ ಶವವನ್ನು ಹಾಸನದ ದುದ್ದ ಚೀರನಹಳ್ಳಿ ಕೆರೆಗೆ ತಂದು ಎಸೆದಿದ್ದ.

ಶೈಲಾಳ ಜತೆಗಿನ ಅಕ್ರಮ ಸಂಬಂಧವೇ ಪತ್ನಿ ಸುಷ್ಮಿತಾ ಕೊಲೆಗೆ ಕಾರಣ ಎನ್ನಲಾಗಿದೆ. ಯಾರಿಗೂ ಅನುಮಾನ ಬರಬಾರದೆಂಬ ಕಾರಣಕ್ಕೆ ಹೊಸದುರ್ಗದಲ್ಲಿ ಕೊಲೆ ಮಾಡಿ ಹಾಸನದ ಅರಸೀಕೆರೆಯ ದುದ್ದ ಗ್ರಾಮದ ಬಳಿಯಿರುವ ಕೆರೆಗೆ ಶವ ಹಾಕಿದ್ದ. ಬಳಿಕ ಪ್ರೇಯಸಿ ಜತೆ ಆರಾಮವಾಗಿ ಓಡಾಡಿಕೊಂಡಿದ್ದ ಆರೋಪಿ ನಾಗರಾಜ್​ ಇದೀಗ ಪೊಲೀಸರ ಬಲಗೆ ಬಿದ್ದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net