

ಹಾಸನ: ಹಾಸನಾಂಬೆ ಜಾತ್ರೆ ಹಿಂದುಗಳ ಪಾಲಿನ ಅಸ್ಮಿತೆ. ಕರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ ಹೊರತು ಸಂಭ್ರಮದ ವಾತಾವರಣ ಕಸಿದುಕೊಂಡಿಲ್ಲ ಎಂದು ಶಾಸಕ ಪ್ರೀತಂ ಜೆ. ಗೌಡ ಹೇಳಿದರು.
ದೀಪಾಲಂಕಾರ ಹಾಗೂ ಹೂವಿನ ಅಲಂಕಾರಕ್ಕೆ ಲಕ್ಷ ಲಕ್ಷ ಖರ್ಚಾದರೆ ಏನೂ ಸಮಸ್ಯೆಯಾಗುವುದಿಲ್ಲ. ಮಹೋತ್ಸವಕ್ಕೆ ದುಡ್ಡಿನ ಕೊರತೆಯಿಲ್ಲ. ಹತ್ತಾರು ಬಾರಿ ಯೋಚಿಸಿ ಸಮಾರಂಭ ಆಯೋಜಿಸಲಾಗಿದೆ. ಹಣ ಪೋಲಾಗುತ್ತಿದೆ ಎಂಬ ಸಂದೇಶ ರವಾನಿಸುವುದು ಸರಿಯಲ್ಲ ಎಂದು ತಮ್ಮ ನಿಲುವು ಸಮರ್ಥಿಸಿಕೊಂಡರು.
ಕರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ನಗರದ ವಿವಿಧೆಡೆ 10 ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಿದ್ದು ಜನರು ಅಲ್ಲಿಂದಲೇ ದರ್ಶನ ಪಡೆಬೇಕು. ನಾನು ಸಹ ಗರ್ಭಗುಡಿ ಬಾಗಿಲು ತೆರೆಯುವ ದಿನ ಮಾತ್ರ ಒಳಗೆ ಬರುತ್ತೇನೆ. ಆ ಬಳಿಕ ಎಲ್‌ಇಡಿ ಸ್ಕ್ರೀನ್‌ನಲ್ಲೇ ನಮಸ್ಕಾರ ಮಾಡಿ ಹಿಂತಿರುಗುತ್ತೇನೆ. ಈ ಸಂಬಂಧ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.