ಟೀಕಾಕಾರರಿಗೆ ತಲೆ ಕೆಡಿಸಿಕೊಳ್ಳಲ್ಲ: ಬಿಜೆಪಿಗೆ ಭವಾನಿ ರೇವಣ್ಣ ಟಾಂಗ್

1f9e0d91-9269-4285-aae6-cbc0c40003cb
Published on


ಹಾಸನ (ಹೊಳೆನರಸೀಪುರ): ಮಾಜಿ ಸಚಿವ ರೇವಣ್ಣ ಅವರನ್ನು ಟೀಕಿಸುವ ಜನರು ದುರ್ಬೀನಿನ ನೆರವು ಪಡೆದು ಬಾಕಿ ಉಳಿದ ಕೆಲಸ ಹುಡುಕಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ ಶಾಸಕ ಪ್ರೀತಂ ಜೆ. ಗೌಡರಿಗೆ ಟಾಂಗ್ ನೀಡಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ 1.42 ಕೋಟಿ ರೂ. ವೆಚ್ಚದ ಉರ್ದು ಶಾಲಾ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಬೇರೆಯವರು ಮಾಡಿದ್ದೆಲ್ಲವನ್ನೂ ನಾನೇ ಮಾಡಿದ್ದು ಅಂತ ರೇವಣ್ಣ ಹೇಳುತ್ತಾರೆ. ಬಿಟ್ಟರೆ ಬೇಲೂರು-ಹಳೇಬೀಡು ನಾನೇ ಕಟ್ಟಿಸಿದ್ದು ಎಂದು ಹೇಳುತ್ತಾರೆ ಎಂಬ ಶಾಸಕ ಪ್ರೀತಂ ಗೌಡರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಜಿಲ್ಲೆ ಅಭಿವೃದ್ಧಿಗೊಳ್ಳಲು ಯಾರು ಕಾರಣವೆಂಬುದು ಜನತೆಗೆ ಗೊತ್ತಿದೆ. ಆದ್ದರಿಂದ ಇಂತಹ ಟೀಕೆಗಳ ಕುರಿತು ತಲೆ ಕೆಡಿಸಿಕೊಳ್ಳಲ್ಲ ಎಂದು ತಿರುಗೇಟು ನೀಡಿದರು.

ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, 1922 ರಲ್ಲಿ ನಿರ್ಮಾಣವಾಗಿರುವ ಶಾಲಾ ಕಟ್ಟಡದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಹೊಸ ಕಟ್ಟಡ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net