ಎಚ್‌ಪಿಸಿಎಲ್ ಎದುರು ದಿಢೀರ್ ಪ್ರತಿಭಟನೆ ನಡೆಸಿದ ಲಾರಿ ಚಾಲಕರು

21HSN3
Published on

ಹಾಸನ: ನಗರದ ಎಚ್‌ಪಿಸಿಎಲ್ ಕಂಪನಿ ಆಡಳಿತ ಮಂಡಳಿ ಟ್ಯಾಂಕರ್ ಚಾಲಕರಿಗೆ ಪೊಲೀಸ್ ವೆರಿಫಿಕೇಷನ್ ಪತ್ರ ತರುವಂತೆ ಪೀಡಿಸುತ್ತಿದ್ದು ಕೆಲಸಕ್ಕೆ ಭಾರಿ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ವಾಹನ ಚಾಲಕ ಹಾಗೂ ಕ್ಲೀನರ್‌ಗಳು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಪೊಲೀಸರಿಂದ ದೃಢಿಕೃತ ಪ್ರಮಾಣ ಪತ್ರ ತರುವುದು ಕಷ್ಟದ ಕೆಲಸವಾಗಿದೆ. ಯಾವುದೇ ಅಪಘಾತ ಪ್ರಕರಣಗಳಲ್ಲಿ ತಾವು ಸಿಲುಕಿಲ್ಲ. ವಾಹನ ಚಾಲನೆಯಲ್ಲಿ ಪರಿಣತಿ ಸಾಧಿಸಿದ್ದೇವೆ ಎಂದು ಹೇಳಿದರೂ ಅಧಿಕಾರಿಗಳು ಕೇಳುತ್ತಿಲ್ಲ ಎಂದರು.

ವರ್ಷಕ್ಕೊಮ್ಮೆ ಪೊಲಿಸ್ ವೇರಿಫಿಕೇಷನ್‌ನ ಪತ್ರ ತರಲು ಹೇಳುತ್ತಾರೆ. ಒಟ್ಟು 4 ಸಾವಿರ ಜನರು ಕೆಲಸ ಮಾಡುತ್ತಿದ್ದು ಎಲ್ಲರೂ ಒಂದೇ ಸಲಕ್ಕೆ ದಾಖಲೆಗಳನ್ನು ಸಲ್ಲಿಸುವುದು ಹೇಗೆ ಸಾಧ್ಯ. 15 ದಿನಗಳ ಒಳಗೆ ಪತ್ರ ಸಲ್ಲಿಸದಿದ್ದರೆ ಕೆಲಸದಿಂದ ತೆಗೆದುಹಾಕುವ ಎಚ್ಚರಿಕೆ ನೀಡಿದ್ದಾರೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net