

ಹಾಸನ: ಶಿರಾಡಿ ಘಾಟ್ ಡಬಲ್ ಟರ್ನ್ ಬಳಿಯಲ್ಲಿ ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್‌ನಿಂದ ದಿಢೀರ್ ಅನಿಲ ಸೋರಿಕೆಯಿಂದ ರಾಷ್ಟ್ರೀಯ ಹೆದ್ದಾರಿ 75ರ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಶುಕ್ರವಾರ ಬೆಳಗ್ಗೆ ಘಟನೆ ನಡೆದಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಅನಿಲ ಸೋರಿಕೆಯಿಂದ ಎಚ್ಚೆತ್ತ ಚಾಲಕ ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ರಸ್ತೆಯ ಎರಡೂ ಬದಿ ಸುಮಾರು 200 ಮೀ.ನಲ್ಲಿ ವಾಹನಗಳ ನಿಲ್ಲಿಸಲಾಗಿದೆ. ಶನಿವಾರ ಸಮೀಪಿಸುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಹೆಚ್ಚಾಗುತ್ತದೆ.
ಆದರೆ ದಿಢೀರ್ ರಸ್ತೆ ಬಂದ್‌ನಿಂದ ಸಾವಿರಾರು ವಾಹನಗಳು ನಿಂತಲ್ಲೇ ನಿಲ್ಲುವಂತಾಗಿದೆ. ಸಂಜೆ ವೇಳೆಗೆ ರಸ್ತೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ. ಅಲ್ಲಿವರೆಗೂ ಬದಲಿ ಮಾರ್ಗದಲ್ಲಿ ಚಲಿಸುವಂತೆ ವಾಹನ ಸವಾರರಿಗೆ ಪೊಲೀಸರು ಮನವಿ ಮಾಡಿದ್ದಾರೆ.