ಈಜಲು ತೆರಳಿದ್ದ ಇಬ್ಬರು ಬಾಲಕರು ಜಲ ಸಮಾಧಿ

WhatsApp Image 2020-12-29 at 10.45.41 AM
Published on

ಸಕಲೇಶಪುರ: ಹೇಮಾವತಿ ನದಿಯಲ್ಲಿ ಈಜಲು ತೆರಳಿದ್ದ ಬಾಲಕರಿಬ್ಬರು ಮುಳುಗಿ ಜಲಸಮಾಧಿಯಾಗಿದ್ದಾರೆ.

ತಾಲೂಕಿನ ಸತ್ತಿಗಾಲ್ ಗ್ರಾಮದ ಪೆಟ್ರೋಲ್ ಲೋಕೇಶ್ ಎಂಬುವರ ಪುತ್ರ ಧನುಷ್ (15) ಹಾಗೂ ಚಂಪಕನಗರ ನಿವಾಸಿ ಕ್ಯಾಸೇಟ್ ಲೋಕೇಶ್ ಅವರ ಪುತ್ರ ಮಣಿಕಂಠ (15) ಮೃತ ಬಾಲಕರು.

ಸೋಮವಾರ ಮಧ್ಯಾಹ್ನ ಊಟದ ನಂತರ ತಮ್ಮ ಸೈಕಲ್ಗಳಲ್ಲಿ ಮನೆಯಿಂದ ತೆರಳಿದ ಬಾಲಕರು ಸಂಜೆಯಾದರೂ ವಾಪಸ್ಸಾಗಲಿಲ್ಲ. ಈ ಹಿನ್ನೆಲೆಯಲ್ಲಿ ಆತಂಕಗೊಂಡ ಪಾಲಕರು ಹುಡುಕಾಟ ನಡೆಸಿದ ವೇಳೆ ಪಟ್ಟಣಕ್ಕೆ ನೀರು ಪೊರೈಸುವ ಚೆಕ್ ಡ್ಯಾಂ ಸಮೀಪ ಸೈಕಲ್ ಹಾಗೂ ಬಟ್ಟೆ ಪತ್ತೆಯಾಗಿವೆ.

ಮಣಿಕಂಠ ಮೃತದೇಹ ಸಿಕ್ಕಿದ್ದು, ಮತ್ತೊಬ್ಬನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net