ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಅಪಘಾತ, ಅಪಾಯದಿಂದ ಪಾರಾದ ಅರೇಮಾದನಹಳ್ಳಿ ಸ್ವಾಮೀಜಿ

WhatsApp Image 2020-12-01 at 6.00.15 PM
Published on

ಹಾಸನ (ಚನ್ನರಾಯಪಟ್ಟಣ): ತಾಲೂಕಿನ ಹಿರೀಸಾವೆ ಬಳಿ ಮಂಗಳವಾರ ವಿಶ್ವಕರ್ಮ ಸಮಾಜ ಅರೇಮಾದನಹಳ್ಳಿ ಮಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್‌ನಲ್ಲಿ ಸಾಗುತಿದ್ದ ಯುವಕನಿಗೆ ಪೆಟ್ಟಾಗಿದ್ದು ಮತ್ತೊಬ್ಬ ಯುವಕ ಹಾಗೂ ಸ್ವಾಮೀಜಿ ಅಪಾಯದಿಂದ ಪಾರಾಗಿದ್ದಾರೆ.

ತಾಲೂಕಿನ ಶ್ರವಣಬೆಳಗೊಳ ಹೋಬಳಿ ಹೊಸಹಳ್ಳಿ ಗ್ರಾಮದ ಎಚ್.ಎನ್. ಯೋಗೇಶ್ ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಯುವಕ.
ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಅವರು ಶಿಷ್ಯರೊಂದಿಗೆ ತಮ್ಮ ಕಾರಿನಲ್ಲಿ ಬೆಂಗಳೂರಿಗೆ ಪ್ರಯಾಣಿಸುತಿದ್ದು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮೇಟಿಕೆರೆ ಗೇಟ್
ಬಳಿ ಸಾಗುತ್ತಿದ್ದ ವೇಳೆ ಬೈಕ್ ಸವಾರರು ರಸ್ತೆ ದಾಟಲು ತಿರುವು ಪಡೆಯುತಿದ್ದ ವೇಳೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದಿದೆ.

ಡಿಕ್ಕಿಯ ಪರಿಣಾಮ ಬೈಕಿನಲ್ಲಿದ್ದ ಇಬ್ಬರು ರಸ್ತೆ ಬದಿಗೆ ಬಿದ್ದಿದ್ದಾರೆ. ಬೈಕ್ ಸವಾರ ಅಪಾಯದಿಂದ ಪಾರಾದರೆ ಬೈಕಿನ ಹಿಂಬದಿ ಕುಳಿತಿದ್ದ ಎಚ್.ಎನ್.ಯೋಗೇಶ್
ಗಾಯಗೊಂಡಿದ್ದಾನೆ. ತಕ್ಷಣ ಎನ್.ಎಚ್ ತುರ್ತು ವಾಹನದಲ್ಲಿ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಅಗತ್ಯ ಚಿಕಿತ್ಸೆ ಕೊಡಿಸಲಾಗಿದೆ.

ಇದರಿಂದ ಸ್ವಾಮೀಜಿಯವರು ತಮ್ಮ ಪ್ರಯಾಣವನ್ನು ಮೊಟಕುಗೊಳಿಸಿದರು. ಅಪಘಾತದ ವಿಷಯ ತಿಳಿದ ಹೋಬಳಿಯ ವಿಶ್ವಕರ್ಮ ಸಂಘದ ಅಧ್ಯಕ್ಷ ನಾಗೇಂದ್ರ, ಮಾಜಿ ಅಧ್ಯಕ್ಷ ಗಣೇಶ್ ಹಾಗೂ ಇತರರು ಬದಲಿ ಕಾರಿನ ವ್ಯವಸ್ಥೆ ಮಾಡಿ ಸ್ವಾಮೀಜಿಯವರನ್ನು ಅರೇಮಾದನಹಳ್ಳಿ ಮಠಕ್ಕೆ ಕಳುಹಿಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net