

ಹಾಸನ: ಜಿಲ್ಲಾ ಪತ್ರಕರ್ತರ ಸಂಘದ ಕಚೇರಿ ಹಿಂಭಾಗ ನೂತನವಾಗಿ ನಿರ್ಮಿಸಿರುವ ಊಟದ ಹಾಲ್‌ಅನ್ನು ಭಾನುವಾರ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹಾಗೂ ಶಾಸಕ ಪ್ರೀತಂ ಜೆ.ಗೌಡ ಉದ್ಘಾಟಿಸಿದರು.
ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ ಅವರು ಮಲೆನಾಡು ಅಭಿವೃದ್ಧಿ ಮಂಡಳಿ ವತಿಯಿಂದ 4 ಲಕ್ಷ ರೂ. ಹಾಗೂ ಶಾಸಕ ಪ್ರೀತಂ ಜೆ.ಗೌಡ ಶಾಸಕರ ನಿಧಿಯಿಂದ ನೀಡಿದ್ದ 2.50 ಲಕ್ಷ ರೂ.ಗಳಲ್ಲಿ ಊಟದ ಹಾಲ್ ನಿರ್ಮಿಸಲಾಗಿದೆ.
ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಸುಸ್ಥಿರ ಸಮಾಜಕ್ಕೆ ಪತ್ರಕರ್ತರ ಕೊಡುಗೆ ಅವಶ್ಯಕವಾಗಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಮಾಡುವ ಲೋಪದೋಷಗಳನ್ನು ಎತ್ತಿ ಹಿಡಿಯುವ, ಒಳ್ಳೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ಕೆಲಸವನ್ನು ಜಿಲ್ಲಾ ಪತ್ರಕರ್ತರು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ ಎಂದರು.
ಶಾಸಕ ಪ್ರೀತಂ ಜೆ.ಗೌಡ ಮಾತನಾಡಿದರು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಬಿ.ಆರ್.ಉದಯ ಕುಮಾರ್, ಎಚ್.ಬಿ. ಮದನಗೌಡ, ಆರ್.ಪಿ.ವೆಂಕಟೇಶಮೂರ್ತಿ, ಜೆ.ಆರ್.ಕೆಂಚೇಗೌಡ, ರವಿ ನಾಕಲಗೂಡು ಇತರರಿದ್ದರು.