

ಹಾಸನ: ಕೋವಿಡ್-19 ಮುಂಜಾಗೃತಾ ಕ್ರಮವಾಗಿ ಪಟಾಕಿ ವರ್ತಕರು ಸರ್ಕಾರದ ನಿರ್ದೇಶನ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಪಟಾಕಿ ವರ್ತಕರೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು.
ಕಡಿಮೆ ಅಪಾಯಕಾರಿ ಹಾಗೂ ಹೆಚ್ಚು ಹಾನಿಕಾರಕವಲ್ಲದ ಪಟಾಕಿ ಹೊರತುಪಟಿಸಿ ಬೇರಾವುದೇ ಸಾಮಗ್ರಿ ಮಾರುವಂತಿಲ್ಲ. ಗ್ರಾಹಕರು ಪರಸ್ಪರ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಬೇಕು. ನ. 16ರ ವರೆಗೆ ಮಾತ್ರ ಪಟಾಕಿ ಮಾರಾಟ ಮಾಡಬೇಕು. ಪರಿಸರ ಸ್ನೇಹಿ ಪಟಾಕಿಗೆ ಎಲ್ಲರೂ ಆದ್ಯತೆ ನೀಡಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪ ವಿಭಾಗಾಧಿಕಾರಿಗಳಾದ ಗಿರೀಶ್ ನಂದನ್, ಬಿ.ಎ. ಜಗದೀಶ್, ತಹಸೀಲ್ದಾರ್‌ರಾದ ಶಿವಶಂಕರಪ್ಪ, ರೇಣುಕುಮಾರ್, ನಟೇಶ್, ಡಿವೈಎಸ್‌ಪಿ ಪುಟ್ಟಸ್ವಾಮಿ ಗೌಡ, ಜಿಲ್ಲಾ ಅಗ್ನಿ ಶಾಮಕಾಧಿಕಾರಿ ರಂಗನಾಥ್ ಹಾಗೂ ಇತರರಿದ್ದರು.