ಮನೆಯವರು ಒಪ್ಪಲ್ಲ ಎಂಬ ಹೆದರಿಕೆಯಿಂದ ಕಣ್ಮರೆಯಾಗಿದ್ದ ಪ್ರೇಮಿಗಳು ಶವವಾಗಿ ಪತ್ತೆ

WhatsApp Image 2020-11-20 at 9.45.40 AM
Published on


ಹಾಸನ (ಚನ್ನರಾಯಪಟ್ಟಣ): ತಾಲೂಕಿನ ಬಾಗೂರು ಸಮೀಪ ನಾಲೆ ಪಕ್ಕ ಬೈಕ್ ಹಾಗೂ
ಚಪ್ಪಲಿ ಬಿಟ್ಟು ಕಣ್ಮರೆಯಾಗಿದ್ದ ಪ್ರೇಮಿಗಳಿಬ್ಬರ ಮೃತ ದೇಹ ತಿಪಟೂರು ತಾಲೂಕು ನೊಣವಿನಕೆರೆ ಬಳಿ ನಾಲೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಗುರುವಾರ ಸಂಜೆ
ಪತ್ತೆಯಾಗಿವೆ.

ತಾಲೂಕಿನ ಹಿರೀಸಾವೆ ಹೋಬಳಿ ಮತಿಘಟ್ಟ ಗ್ರಾಮದ ರಮೇಶ್ (19) ಹಾಗೂ ಹಿರೀಸಾವೆ ಗ್ರಾಮದ ಸುಶ್ಮಿತಾ (19) ಮೃತ ಪ್ರೇಮಿಗಳು. ಬಾಗೂರಿನಲ್ಲಿ ಐಟಿಐ ಓದುತ್ತಿದ್ದ ರಮೇಶ್ ಹಾಗೂ ಹಿರೀಸಾವೆಯಲ್ಲಿ ಪದವಿ ಓದುತ್ತಿದ್ದ ಸುಶ್ಮಿತಾ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಯ ವಿಚಾರ ಇನ್ನೂ ಎರಡೂ ಮನೆಯವರಿಗೆ ಅಷ್ಟೇನು ತಿಳಿದಿರಲಿಲ್ಲ. ಆದರೆ ಅಂತರ್ಜಾತಿ ಎಂಬ ಕಾರಣಕ್ಕೆ ಮನೆಯವರು ವಿರೋಧಿಸಬಹುದು ಎಂದು ಹೆದರಿ ಆತ್ಮಹತ್ಯೆ
ಮಾಡಿಕೊಳ್ಳಲು ನಿರ್ಧರಿಸಿರುವ ಪ್ರೇಮಿಗಳು ನ.17 ರಂದು ಬಾಗೂರು ಸಮೀಪ ಹೇಮಾವತಿ ನಾಲೆಯ ಸುರಂಗದ ಬಳಿ ಬೈಕ್ ನಿಲ್ಲಿಸಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾಲೆಯ ಬಳಿ ಬೈಕ್ ಹಾಗೂ ಚಪ್ಪಲಿಗಳಿದ್ದು ಸ್ಥಳಿಯರು ಮಾಹಿತಿ ನೀಡಿದ ಹಿನ್ನೆಲೆ ಹಿರೀಸಾವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಪ್ರೇಮಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಗುರುವಾರ ಸಂಜೆ ತಿಪಟೂರು ತಾಲೂಕು ನೊಣವಿನಕೆರೆ ಬಳಿ ನಾಲೆಯಲ್ಲಿ ಜೋಡಿ ಶವಗಳು ತೇಲುತಿದ್ದ ವೀಡಿಯೋ ವೈರಲ್ ಆದ ಹಿನ್ನೆಲೆ ಸ್ಥಳಕ್ಕೆ ನೊಣವಿನಕೆರೆ ಪೊಲೀಸರು ಧಾವಿಸಿ ಮೃತ ದೇಹಗಳನ್ನು ಹೊರತೆಗೆದಿದ್ದಾರೆ.

ಪ್ರೇಮಿಗಳಿಬ್ಬರು ಅಪ್ಪಿಕೊಂಡು ವೇಲಿನಿಂದ ಸೊಂಟಕ್ಕೆ ಕಟ್ಟಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕಳೆದ ಎರಡು ದಿನಗಳ ಹಿಂದೆ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಸುಶ್ಮಿತಾ ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿದ್ದ ಹಿನ್ನೆಲೆ ಈ ಪ್ರೇಮಿಗಳನ್ನು ಗುರುತಿಸಲಾಗಿದೆ.
ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net