ಮುಂದುವರಿದ ಕಾಡಾನೆ ದಾಳಿ: ಬೆಳಂ ಬೆಳಗ್ಗೆ ಪ್ರಾಣ ಕಳೆದುಕೊಂಡ ಕಾರ್ಮಿಕ

WhatsApp Image 2021-01-03 at 11.46.25 AM
Published on

ಬೇಲೂರು: ಮಲೆನಾಡಿನಲ್ಲಿ ಕಾಡಾನೆ-ಮಾನವ ಸಂಘರ್ಷ ಮುಂದುವರಿದಿದ್ದು ಭಾನುವಾರ ಬೆಳ್ಳಂ ಬೆಳಗ್ಗೆ ಸಲಗದ ದಾಳಿಗೆ ಕಾರ್ಮಿಕ ಮೃತಪಟ್ಟಿದ್ದಾನೆ.

ವಿರಾಜಪೇಟೆ ಮೂಲದ ರಾಜನ್ (45) ಮೃತರು. ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಕ್ಕೋಡು ಹೋಬಳಿ ಲಕ್ಕುಂದ ಗ್ರಾಮದ ಸುಲ್ತಾನ್ ಎಸ್ಟೇಟ್‌ನಲ್ಲಿ ಕಾಳು ಮೆಣಸು ಕಾಯುತ್ತಿದ್ದ ರಾಜನ್ ಬೆಳಗ್ಗೆ 8ರ ವೇಳೆ ಆನೆ ದಾಳಿಗೆ ಸಿಲುಕಿದ್ದಾರೆ.

ಆನೆ ಬರುತ್ತಿದ್ದಂತೆ ಅಲ್ಲಿಂದ ಪಾರಾಗಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಕಾಲ್ತುಳಿತಕ್ಕೆ ಸಿಲುಕು ಕೆಲವೇ ನಿಮಿಷಗಳಲ್ಲಿ ಪ್ರಾಣ ಬಿಟ್ಟಿದ್ದಾರೆ. ವ್ಯಾಪ್ತಿಯಲ್ಲಿ ಎಂಟು ಕಾಡಾನೆಗಳ ಸುತ್ತಾಟ ಮುಂದುವರಿದಿದ್ದು ಜನರು ತೀವ್ರ ಭೀತಿ ಎದುರಿಸುತ್ತಿದ್ದಾರೆ. ಸ್ಥಳಕ್ಕೆ ಅರೇಹಳ್ಳಿ ಠಾಣೆ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net