ಎಷ್ಟೇ ಕೂಗಾಡಿದರೂ, ಯಾರಿಗೂ ತೊಂದರೆ ಕೊಡದೆ ಗ್ರಾಮದಲ್ಲಿ ವಾಕಿಂಗ್ ಮಾಡಿದ ಸಲಗ!

Salaga
Published on

ಹಾಸನ (ಆಲೂರು): ಆಲೂರು ತಾಲೂಕಿನ ಅಬ್ಬನ ಗ್ರಾಮದಲ್ಲಿ ಗುರುವಾರ ಬೆಳ್ಳಂ ಬೆಳಗ್ಗೆ ಸಲಗ ಸಂಚಾರ ನಡೆಸಿದ್ದು ’ವಾಕಿಂಗ್ ಬಂದಿದ್ದೀನಿ ದಾರಿ ಬಿಡಿ’ ಎಂಬ ಧಾಟಿಯಲ್ಲಿ ನಡೆದುಕೊಂಡು ಹೋಗಿರುವ ದೃಶ್ಯ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರು ರಾಜನಡಿಗೆಯನ್ನು ಕುತೂಹಲದಿಂದ ವೀಕ್ಷಿಸಿದರು.

ಹೌದು, ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು ಅವು ಊರಿಗೆ ಲಗ್ಗೆಯಿಡುವುದು ಸಾಮಾನ್ಯ. ಆನೆ ಬಂತೆಂದರೆ ಸಾರ್ವಜನಿಕರು ಭಯಭೀತರಾಗಿ ಮನೆ ಬಾಗಿಲು ಹಾಕಿಕೊಂಡು ದೂರವಿರುವುದು ಇಷ್ಟು ದಿನ ಕಂಡುಬಂದ ದೃಶ್ಯ.

ಆದರೆ ಅಬ್ಬನ ಗ್ರಾಮದಲ್ಲಿ ಸಂಚರಿಸಿದ ಕಾಡಾನೆಯಿಂದ ಸಾರ್ವಜನಿಕರು ಹತ್ತಿರದಲ್ಲೇ ಇದ್ದರು. ತನ್ನ ಪಾಡಿಗೆ ತಾನು ನಡೆದು ಹೋಗುತ್ತಿದ್ದ ಆನೆಯನ್ನು ಕಂಡು ಊರೊಳಗೆ ವಾಕಿಂಗ್ ಮಾಡ್ತಿದೆ ಮಾಡ್ಲಿ ಬಿಡಿ ಎಂದರು.

ಗ್ರಾಮದಲ್ಲಿ ಅರ್ಧ ಕಿ.ಮೀ. ಸಾಗಿದ ಕಾಡಾನೆ ಕಾಡಾನೆ ಹಿಂಬಾಲಿಸಿದ ಜನರು ತೋಟದ ಕಡೆಗೆ ಅಟ್ಟಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net