ರೈತಪರ ಹೋರಾಟಗಾರ ಕೊಟ್ಟೂರು ಶ್ರೀನಿವಾಸ್ ಇನ್ನಿಲ್ಲ

KOTTURU SRINIVAS
Published on

ಹಾಸನ: ರೈತ ಹೋರಾಟಗಾರ, ಸಮಾಜಮುಖಿ ಚಿಂತನೆಯ ನಾಯಕ ಕೊಟ್ಟೂರು ಶ್ರೀನಿವಾಸ್ (60) ಮಂಗಳವಾರ ನಿಧನರಾದರು.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಶ್ರೀನಿವಾಸ್ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹದಿನೈದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಡಯಾಲಿಸಿಸ್ ಮಾಡುತ್ತಿರುವಾಗ ಹೃದಯಾಘಾತವಾಗಿ ಕೊನೆಯುಸಿರೆಳೆದರು. ಪತ್ನಿ ಪ್ರಮಿಳಾ, ಮಗಳು ರುಚಿರ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಬುಧವಾರ ಬೆಳಗ್ಗೆ ಹಾಸನದ ಬಿಟ್ಟಗೌಡನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಮೂಲತ: ಬಳ್ಳಾರಿ ಜಿಲ್ಲೆ ಕೊಟ್ಟೂರಿನವರಾದ ಶ್ರೀನಿವಾಸ್ 30 ವರ್ಷಗಳಿಂದ ಹಾಸನದಲ್ಲಿಯೇ ನೆಲೆಯೂರಿದ್ದರು. ರೈತ ಸಂಘದ ಜಿಲ್ಲಾಧ್ಯಕ್ಷರಾಗಿ ಸಾಕಷ್ಟು ಹೋರಾಟ ರೂಪಿಸಿದ್ದರು. ಸಾಕ್ಷರತಾ ಆಂದೋಲನ, ದಲಿತಪರ ಹೋರಾಟಗಳಲ್ಲಿ ಕೊಟ್ಟೂರು ಶ್ರೀನಿವಾಸ್ ಅವರ ಉಪಸ್ಥಿತಿ ಮುಖ್ಯವಾಗಿರುತ್ತಿತ್ತು. ಪತ್ರಕರ್ತರಾಗಿಯೂ ಕೆಲಸ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net