ಬೌನ್ಸ್ ಬೈಕ್‌ಗಳಿಗೆ ಬೆಂಕಿ ಪ್ರಕರಣ: ಆತ್ಮಹತ್ಯೆಗೆ ಯತ್ನಿಸಿದ ಕಟ್ಟಡ ಮಾಲೀಕ, ಪತ್ನಿಗೂ ಹೃದಯಾಘಾತ

d07600a2-9ee2-4cdb-b0c9-999aac32b079
Published on

ಹಾಸನ: ಶಾರ್ಟ್ ಸರ್ಕ್ಯೂಟ್‌ನಿಂದ ನಾಲ್ಕು ಮಹಡಿಯ ಕಟ್ಟಡಕ್ಕೆ ಅಪಾರ ಹಾನಿಯಾದ್ದರಿಂದ ಜಿಗುಪ್ಸೆಗೊಂಡ ಮಾಲೀಕ ಆತ್ಮಹತ್ಯೆಗೆ ಯತ್ನಿಸಿದ್ದು, ಪತ್ನಿಗೂ ಹೃದಯಾಘಾತವಾಗಿದೆ.

ನಗರದ ವರ್ತುಲ ರಸ್ತೆಯಲ್ಲಿರುವ ಗುರುವಾರ ಮುಂಜಾನೆ ಬೌನ್ಸ್ ಸೆಲ್ಫ್ ಡ್ರೈವ್ ಸ್ಕೂಟರ್‌ಗಳ ಚಾರ್ಜಿಂಗ್ ಕೇಂದ್ರವಿದ್ದ ಕಟ್ಟಡದಲ್ಲಿ ಬೆಂಕಿ ಹೊತ್ತಿ 80 ಬೈಕ್‌ಗಳು ಬೆಂಕಿಗಾಹುತಿಯಾಗಿದ್ದವು. ಇಷ್ಟು ಮಾತ್ರವಲ್ಲದೆ ಕಟ್ಟಡ ಬಿರುಕು ಬಿಟ್ಟಿದ್ದು ಮಾಲೀಕ ಜಗದೀಶ್ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಪತ್ನಿಗೆ ಹೃದಯಾಘಾತವಾಗಿದೆ. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪೆನ್ಷನ್ ಮೊಹಲ್ಲಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸುಮಾರು 1.20 ಕೋಟಿ ರೂ. ಖರ್ಚು ಮಾಡಿ ಕಟ್ಟಿದ್ದ ಮನೆ ಹಾಳಾಯಿತಲ್ಲ ಎಂದು ಜಗದೀಶ್ ತೀವ್ರ ಮನನೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net