ಹಾಸನ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರ ದುರ್ಮರಣ

c935029f-9e24-4d69-97d7-8ea751e39871
Published on

ಹಾಸನ: ರಾಷ್ಟ್ರೀಯ ಹೆದ್ದಾರಿ 75 ನಗರ ಹೊರವಲಯದ ಕೆಂಚಟ್ಟಹಳ್ಳಿ ಬಳಿ ಭಾನುವಾರ ಬೆಳಗ್ಗೆ ಭೀಕರ ಕಾರು ಅಪಘಾತ ಸಂಭವಿಸಿದ್ದು, ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

13 ಜನರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಜಿಎಫ್ ಮೂಲದ ನವೀನ್ ಕುಮಾರ್, ಪ್ರದೀಪ್ ಕುಮಾರ್, ಸುನೀಲ್‌ಕುಮಾರ್, ಪುನೀತ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಅನಿಲ್‌ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೆಜಿಎಫ್ ಮೂಲದ ಎಂಟು ಜನ ಕ್ವಾಲಿಸ್ ವಾಹನದಲ್ಲಿ ಮದುವೆ ನಿಮಿತ್ತ ಉಡುಪಿಗೆ ತೆರಳುತ್ತಿದ್ದರು. ಕೋಲಾರ ಜಿಲ್ಲೆ ಮುಳಬಾಗಿಲು ಮೂಲದ ಒಂದೇ ಕುಟುಂಬದ ಹತ್ತು ಜನ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದರು. ಸುಮಾರು ಮೂರು ಗಂಟೆ ಸುಮಾರಿನಲ್ಲಿ ಟಾಟಾ ಸುಮೋದಲ್ಲಿದ್ದ ಕುಟುಂಬ ಶಾಂತಿಗ್ರಾಮದ ಬಳಿ ಇಳಿದು ಕಾಫಿ ಕುಡಿದು ಮತ್ತೆ ಪ್ರಯಾಣ ಆರಂಭಿಸಿದ್ದಾರೆ.

ಕೆಂಚಟ್ಟಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರೋಡ್ ಹಂಪ್ಸ್ೃ ಹಾಕಿದ್ದು ಟಾಟಾ ಸುಮೋ ಚಾಲಕ ವಾಹನವನ್ನು ಸ್ಲೋ ಮಾಡಿದ್ದಾನೆ. ಹಿಂದೆ ಬರುತ್ತಿದ್ದ ಕ್ವಾಲಿಸ್ ವಾಹನ ಅತಿ ವೇಗದಲ್ಲಿದ್ದು ಚಾಲಕನ ನಿಯಂತ್ರಣ ತಪ್ಪಿ ಮುಂದೆ ಇದ್ದ ಟಾಟಾ ಸುಮೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಾಟಾ ಸುಮೋ ಪಲ್ಟಿಯಾಗಿದೆ. ಕ್ವಾಲಿಸ್ ವಾಹನದಲ್ಲಿದ್ದ ಎಂಟು ಜನರಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳೀಯರು ವಾಹನಗಳಲ್ಲಿ ಸಿಲುಕಿ ಹಾಕಿಕೊಂಡಿದ್ದವರನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net