

ಹಾಸನ: ತಾಲೂಕಿನ ಬೂವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಪರಿಣಾಮ ಬುಧವಾರ ಕರೊನಾ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದ ನಾಗರಿಕರು ಪರದಾಡಬೇಕಾಯಿತು.
ಸುತ್ತಲಿನ ಮೂರು ಗ್ರಾಮಗಳಿಂದ 60 ವರ್ಷ ಮೇಲ್ಪಟ ನೂರಾರು ಏಕಾಏಕಿ ಬಂದಿದ್ದರಿಂದ ಭಾರಿ ತೊಂದರೆಯಾಯಿತು.
ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಳ್ಳುವಂತೆ ಆಶಾ ಕಾರ್ಯಕರ್ತರು ಫೋನ್ ಮಾಡಿ ತಿಳಿಸಿದ್ದರು. ಹೀಗಾಗಿ ನೂರಾರು ಜನರು ಒಮ್ಮೇಲೆ ದಾಂಗುಡಿಯಿಟ್ಟರು. ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಒಬ್ಬರೇ ದಾಖಲಾತಿ ಅಪ್ಡೇಟ್‌ಗೆ ಸಿಬ್ಬಂದಿಯಿಲ್ಲದೆ ತೀವ್ರ ತೊಂದರೆಯಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅವ್ಯವಸ್ಥೆಗೆ ವೃದ್ಧರು ಹಿಡಿಶಾಪ ಹಾಕಿದರು. ಸಾರ್ವಜನಿಕರನ್ನು ನಿಯಂತ್ರಿಸಲು ಆರೋಗ್ಯ ಕೇಂದ್ರದ ಸಿಬ್ಬಂದಿ ಹೈರಾಣಾದರು. ಒಟ್ಟು 215 ಜನರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಯಿತು.