ಖಾಸಾ ದೋಸ್ತ್‌ನನ್ನೇ ಮಚ್ಚಿನಿಂದ ಕೊಚ್ಚಿ ಕೊಂದರು..ಕಾರಣ ಕೇಳಿದ್ರೆ ಶಾಕ್ ಆಗ್ತೀರ!

9HSN 01
Published on

ಹಾಸನ: ’ಆತ ಇವರಿಗೆ ಚಡ್ಡಿ ದೋಸ್ತ್, ನಿತ್ಯ ಒಟ್ಟಿಗೆ ಓಡಾಡಿಕೊಂಡಿದ್ದರು. ಆದರೆ ಜತೆಗಿದ್ದವನನ್ನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದರು…’
ಅದಕ್ಕೆ ಕಾರಣ ಕೇಳಿದರೆ ಎಂತವಾರದರೂ ಶಾಕ್ ಆಗ್ತಾರೆ. ಸಾಲ ಪಡೆದಿದ್ದ ಆತ ಅವರನ್ನು ಏಕವಚನದಲ್ಲಿ ಮಾತಾಡಿಸಿದ್ದ, ಜಗಳವೊಂದರಲ್ಲಿ ಕಪಾಳಕ್ಕೆ ಬಾರಿಸಿದ್ದ, ಸಾಲ ವಾಪಸ್ ಮಾಡದಿದ್ದರೂ ಬೀಗರ ಊಟಕ್ಕೆ ಬಂದಿದ್ದ. ಹೌದು, ನಗರದ ಅರಳಿಕಟ್ಟೆ ವೃತ್ತದಲ್ಲಿ ಡಿ. 5ರ ರಾತ್ರಿ ರಂಗೋಲಿಹಳ್ಳದ ರಘು ಗೌಡ ಎಂಬಾತನ ಹತ್ಯೆಗೆ ಇದಿಷ್ಟು ಕಾರಣವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಂಗೋಲಿಹಳ್ಳ ನಿವಾಸಿ ಭವಿತ್ (19), ಶಾಂತಿನಗರದ ತೇಜಸ್ (19), ಜಯನಗರ ನಿವಾಸಿ ಪುನೀತ್ (21), ಚನ್ನಪಟ್ಟಣ ಹೌಸಿಂಗ್ ಬೋರ್ಡ್‌ನ ನವೀನ್‌ಕುಮಾರ್ (21), ಶಾಂತಿನಗರದ ವಿವೇಕ್ (24) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಈಗಷ್ಟೇ ಕಾಲೇಜು ವ್ಯಾಸಂಗ ಮುಗಿಸಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಆರೋಪಿ ನವೀನ್‌ಕುಮಾರ್ ಐಟಿಐ ವಿದ್ಯಾರ್ಥಿ. ಹತ್ಯೆಗೀಡಾದ ರಘು ಗೌಡ ಅತ್ಯಾಪ್ತ ಸ್ನೇಹಿತನಾಗಿದ್ದು ಹಣಕಾಸಿನ ವಿಚಾರಕ್ಕೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಘು ಗೌಡ ಸ್ನೇಹಿತ ತೇಜಸ್‌ನಿಂದ ವರ್ಷದ ಹಿಂದೆ 1.50 ಲಕ್ಷ ರೂ. ಸಾಲ ಪಡೆದಿದ್ದ. ಹಣ ಕೊಟ್ಟು ಬಹಳ ದಿನಗಳಾಗಿದ್ದು ಅಕ್ಕನ ಮದುವೆ ಮಾಡಬೇಕು. ದುಡ್ಡು ವಾಪಸ್ ಕೊಡು ಎಂದು ತೇಜಸ್ ಕೇಳಿದ್ದ. ಆಗ ರಘು 50 ಸಾವಿರ ರೂ. ಮರಳಿಸಿ ಒಂದು ಲಕ್ಷ ರೂ. ಉಳಿಸಿಕೊಂಡಿದ್ದ. ಈ ಸಂಬಂಧ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಒಂದು ದಿನ ಸ್ನೇಹಿತರೆಲ್ಲರೂ ಒಟ್ಟಿಗೆ ಸೇರಿದಾಗ ಐದು ಜನರು ಸೇರಿ ರಘು ಗೌಡನನ್ನು ಏಕವಚನದಲ್ಲಿ ಬೈಯ್ದಿದ್ದರು. ಇದರಿಂದ ಆಕ್ರೋಶಗೌಡ ರಘು ಭವಿತ್‌ನ ಕೆನ್ನೆಗೆ ಬಾರಿಸಿದ್ದನು. ಇದು ಆಕ್ರೋಶ ಹೆಚ್ಚಾಗಲು ಕಾರಣ ಎಂದು ಎಸ್ಪಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net