ಹಬ್ಬಕ್ಕೆಂದು ಅಜ್ಜಿ ಊರಿಗೆ ಹೋದ ಯುವಕ ಮರಳಿದ್ದು ಶವವಾಗಿ: ತಡರಾತ್ರಿ ನಡೆಯಿತು ಭೀಕರ ಘಟನೆ

Youth
Published on

ಹಾಸನ: ಯುವಕನೊಬ್ಬನನ್ನು ಗುಂಡಿಕ್ಕಿ ಕೊಲೆ ಮಾಡಿರುವ ಅಮಾನವೀಯ ಘಟನೆ ಚನ್ನರಾಯಪಟ್ಟಣ ತಾಲೂಕಿನಲ್ಲಿ ಗುರುವಾರ ತಡ ರಾತ್ರಿಯಲ್ಲಿ ನಡೆದಿದೆ.

ಪುನೀತ್ (28) ಕೊಲೆಯಾದ ಯುವಕ. ಬೇಡಿಗನಹಳ್ಳಿ ಕೆರೆಯ ಏರಿ ಮೇಲೆ ಶೂಟೌಟ್ ಮಾಡಿ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಪುನೀತ್​ ಸ್ವಗ್ರಾಮ ಹೊಸೂರಿನಿಂದ ಬೇಡಿಗನಹಳ್ಳಿಯ ಅಜ್ಜಿಯ ಮನೆಗೆ ಹಬ್ಬಕ್ಕೆಂದು ಹೋಗಿದ್ದ. ಹಬ್ಬ ಮುಗಿಸಿಕೊಂಡು ವಾಪಸ್ ಬರುವಾಗ ಕೆರೆಯ ಏರಿ ಮೇಲೆ ಕೊಲೆ ಮಾಡಲಾಗಿದೆ.

ಘಟನಾ ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಮೃತದೇಹವನ್ನು ಚನ್ನರಾಯಪಟ್ಟಣದ ಸರ್ಕಾರಿ ಶವಾಗಾರಕ್ಕೆ ರವಾನೆ ಮಾಡಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net