ನಿವೃತ್ತ ಪೌರಕಾರ್ಮಿಕರಿಗೆ ಸನ್ಮಾನ

14blrp5
Published on

ಬೇಲೂರು: ಇಲ್ಲಿನ ಪುರಸಭೆಯಲ್ಲಿ ಪೌರಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಶಾರದಮ್ಮ ಹಾಗೂ ನಾಗಮ್ಮ ಅವರನ್ನು ಸ್ವಗೃಹದಲ್ಲೇ ತಾಲೂಕು ದೇಶ ಭಕ್ತರ ಬಳಗದಿಂದ ಸನ್ಮಾನಿಸಲಾಯಿತು.
ಬಳಗದ ಅಧ್ಯಕ್ಷ ಡಾ.ಸಂತೋಷ್ ಮಾತನಾಡಿ, ಜೀವದ ಹಂಗನ್ನು ತೊರೆದು ಪಟ್ಟಣದ ನಾಗರಿಕ ಆರೋಗ್ಯ ಕಾಪಾಡಲು ಪೌರ ಕಾರ್ಮಿಕರ ಪಾತ್ರ ಮಹತ್ತರವಾದದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಳಗದ ಕೆ.ಆರ್.ಮಂಜುನಾಥ್, ಮಹೇಶ್, ಪ್ರಕಾಶ್, ಶ್ರೀನಿವಾಸ್, ಶುಭಾ, ವಿದ್ಯಾ ಹಾಗೂ ಪೌರ ಕಾರ್ಮಿಕರ ಕುಟುಂಬದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net