

ಹಾಸನ: ಮಹಾಮಾರಿ ಕರೊನಾ ಸಂಕಷ್ಟದಿಂದ ನೊಂದು ಕಂಗಲಾಗಿರುವ ರೈತರಿಗೆ ಇದೀಗ ಬ್ಯಾಂಕ್‌ನಿಂದ ನೋಟಿಸ್ ಆಘಾತ ಎದುರಾಗಿದೆ.
ಸಾಲ ಮರುಪಾವತಿ ಮಾಡುವಂತೆ ರೈತರ ಮನೆಗೆ ಬಂದು ಕೆನರಾ ಬ್ಯಾಂಕ್ ಸಿಬ್ಬಂದಿ ನೋಟೀಸ್ ನೀಡುತ್ತಿದ್ದಾರೆ. ಹಾಸನದ ಚನ್ನರಾಯಪಟ್ಟಣ ಶಾಖೆಯ ಕೆನರಾ ಬ್ಯಾಂಕ್ ಸಿಬ್ಬಂದಿ ಕರೊನಾ ಸಂಕಷ್ಟ ಸಮಯದಲ್ಲಿ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ.
ಈಗಾಗಲೇ ಸುಮಾರು 50ಕ್ಕೂ ಹೆಚ್ಚು ಜನರಿಗೆ ನೋಟಿಸ್ ನೀಡಲಾಗಿದೆ. ಮೊದಲೇ ಕರೊನಾ ಸಂಕಷ್ಟದಿಂದ ಸರಿಯಾಗಿ ಕೂಲಿ ಸಿಗುತ್ತಿಲ್ಲ. ಬೆಳೆದ ಬೆಳೆಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ. ಇದರ ನಡುವೆ ನೋಟಿಸ್ ನೀಡುತ್ತಿರುವುದು ರೈತರನ್ನು ಚಿಂತೆಗೆ ದೂಡಿದೆ.
ದಯವಿಟ್ಟು ನಮ್ಮ ಸಾಲಮನ್ನಾ ಮಾಡಿ. ಬ್ಯಾಂಕ್‌ಗಳಿಗೆ ನೋಟಿಸ್ ನೀಡಿ ಕಿರುಕುಳ ನೀಡದಂತೆ ಎಚ್ಚರಿಕೆ ನೀಡಿ ಎಂದು ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇನ್ನು ಮಗ ತೀರಿ ಹೋದ ನಂತರ ವಯೋವೃದ್ಧ ತಂದೆ-ತಾಯಿಗೆ ನೊಟೀಸ್ ನೀಡಿದ್ದು, ನನ್ನ ಮಗ ಈಗಾಗಲೇ ಸಾಲದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿ ಹಲವು ದಿನ ಕಳೆದಿವೆ. ಹೀಗಾದ್ರೆ ನಾವು ಬದುಕೋದು ಹೇಗೆ ಎಂದು ಕಣೀರಿಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)