ವೈಕುಂಠ ಏಕಾದಶಿ ಸಂಭ್ರಮ

6ark2
Published on

ಅರಕಲಗೂಡು: ತಾಲೂಕಿನ ಹುಲಿಕಲ್ ಗ್ರಾಮದ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಸೋಮವಾರ ವೈಕುಂಠ ಏಕಾದಶಿ ಪೂಜಾ ಕಾರ್ಯ ಜರುಗಿತು.
ಬೆಳಗ್ಗೆ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಉತ್ಸವ ಮೂರ್ತಿಯನ್ನು ಅಲಂಕರಿಸಿ ಪ್ರಕಾರೋತ್ಸವ ನಡೆಸಿ ವೈಕುಂಠ ದ್ವಾರದಲ್ಲಿ ಕೂರಿಸಲಾಯಿತು.
ದೇವರ ದರ್ಶನ ಪಡೆದ ಭಕ್ತರು ವೈಕುಂಠ ದ್ವಾರದ ಪ್ರವೇಶ ಮಾಡಿದರು. ನಂತರ ದೇವಾಲಯದಲ್ಲಿ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net