ತಮ್ಮ ಮೊಬೈಲ್ ನಂಬರ್ ಕೊಟ್ಟು ಹೀಗಂದ್ರು ಐಜಿ!

8HSN3
Published on

ಹಾಸನ: ಪೊಲೀಸರು ಇರುವುದು ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ, ಆದ್ದರಿಂದ ಏನೇ ಸಮಸ್ಯೆ ಇದ್ದರೂ ನನಗೆ ಕರೆ ಮಾಡಬಹುದು. ಆದರೆ ಸಂಜೆ ಕುಡಿದ ಮೇಲೆ ದಯವಿಟ್ಟು ಕರೆ ಮಾಡಬೇಡಿ ಎಂದು ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕ ವಿಪುಲ್‌ಕುಮಾರ್ ಹಾಸ್ಯ ಚಟಾಕಿ ಹಾರಿಸಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.

ಸಾರ್ವಜನಿಕರ ಸೇವೆಗಾಗಿಯೇ ಪೊಲೀಸರು ಇದ್ದಾರೆ. ಏನೇ ಸಮಸ್ಯೆಗಳಿದ್ದರೂ ನನಗೆ ಫೋನ್ ಮಾಡಬಹುದು. ಆದರೆ ಸಂಜೆ ಕುಡಿದ ಬಳಿಕ ಕರೆ (9480800031) ಮಾಡಿ ತೊಂದರೆ ಕೊಡಬಾರದು. ಜನ ಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ಸಾಕಷ್ಟು ಪ್ರಯತ್ನ ನಡೆಯುತ್ತಿದ್ದು, ಅಪರಾಧ ಪ್ರಕರಣ ತಡೆಗೆ ಗುಪ್ತ ಮಾಹಿತಿಗಾರರಾಗಿ ಸಾರ್ವಜನಿಕರು ನೆರವಾಗಬೇಕು ಎಂದರು.

ಇಲಾಖೆಗಳ ಪರಿವೀಕ್ಷಣೆಗಾಗಿ ಎರಡು ದಿನ ಜಿಲ್ಲಾ ಪ್ರವಾಸ ಕೈಗೊಂಡಿದ್ದೆ. ಹಾಸನದಲ್ಲಿ ಪೊಲೀಸ್ ಅಧಿಕಾರಿಗಳ ಕೆಲಸದ ಕುರಿತು ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಕರೊನಾ ವಿರುದ್ಧದ ಹೋರಾಟ ಇನ್ನು ಮುಂದುವರಿಯಬೇಕಾಗುತ್ತದೆ. ಡ್ರಗ್ಸ್, ಮಹಿಳಾ ದೌರ್ಜನ್ಯ, ಕೊಲೆ ಪ್ರಕರಣ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೊಲೆ ಪ್ರಕರಣಗಳನ್ನು ತಡೆಯಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಆದರೆ ಅಂತಹ ಮಾಹಿತಿ ಸಿಕ್ಕರೆ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net