116 ಎಕರೆ ಜಮೀನಿನಲ್ಲಿ ಹಸಿರುವನ : ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಚಾಲನೆ

sode web
Published on

ಉಡುಪಿ: ವಾದಿರಾಜ ಗುರು ಸಾರ್ವಭೌಮರ ಜನ್ಮಸ್ಥಳ ಕುಂದಾಪುರ ಸಮೀಪದ ಹೂವಿನಕೆರೆ ಸೋದೆ ವಾದಿರಾಜ ಮಠದ 116 ಎಕರೆ ಜಮೀನಿನಲ್ಲಿ ಹಸಿರುವನ ಯೋಜನೆಗೆ ಸೋದೆ ಮಠದ ಪೀಠಾಧಿಪತಿ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಗುರುವಾರ ಚಾಲನೆ ನೀಡಿದರು.

ಹಸಿರುವನದಲ್ಲಿ ಶ್ರೀಗಂಧ ಹಾಗೂ ಸಾಗುವಾನಿ ವೃಕ್ಷ, ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವ ನಾನಾ ಬಗೆಯ ಹಣ್ಣಿನ ಗಿಡ, ಮರಗಳು, ಪರಿಸರಕ್ಕೆ ಶುದ್ಧ ಆಮ್ಲಜನಕ ನೀಡುವ ವೃಕ್ಷಗಳು, ಆಯುರ್ವೇದ ಶಾಸ್ತ್ರಕ್ಕೆ ಸಂಬಂಧಿಸಿದ ಔಷಧೀಯ ಗುಣವುಳ್ಳ ವೃಕ್ಷ ಸಂಕುಲಗಳನ್ನು ಬೆಳೆಸಲಾಗುವುದು ಎಂದರು. ಭೂಮಿಯ ಅಂತರ್ಜಲ ಮಟ್ಟ ವೃದ್ಧಿಸಲು ಜಮೀನಿನ ಸುತ್ತಲೂ 5 ಅಡಿ ಆಳದ ತೋಡು, ಒಳಭಾಗದಲ್ಲಿ ಇಂಗುಗುಂಡಿ ಸಹಿತ ಹಿರಿದಾದ 1 ಮದಗ ನಿರ್ಮಿಸಲು ಯೋಜಿಸಲಾಗಿದೆ ಎಂದರು.

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಹಾಯಕ ಕಮಿಷನರ್ ಕೆ.ರಾಜು, ಯೋಜನೆಯ ಮೇಲ್ವಿಚಾರಣೆ ಹೊಣೆ ಹೊತ್ತಿರುವ ಹಸಿರುನಾಡು ಸಂಸ್ಥೆಯ ಪ್ರವರ್ತಕಿಯರಾದ ಅಕ್ಷಯ ಶೆಟ್ಟಿ ಮತ್ತು ಸುಷ್ಮಾ ರಾವ್, ಸೋದೆ ಮಠದ ದಿವಾನ ಪಾಡಿಗಾರು ಶ್ರೀನಿವಾಸ ತಂತ್ರಿ ಉಪಸ್ಥಿತರಿದ್ದರು. ರತ್ನಕುಮಾರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net