ಹಸೀಬುಲ್ಲಾ ಬೇಗ್ ದೊಡ್ಡಿಂದುವಾಡಿಯ ಹೆಮ್ಮೆ

5-kollegal-1,
ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿಎಸ್‌ಟಿ ದಿನ ಆಚರಣೆಯಲ್ಲಿ ಹಸೀಬುಲ್ಲಾ ಬೇಗ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
Published on


ಕೊಳ್ಳೇಗಾಲ: ಮೈಸೂರು ವಾಣಿಜ್ಯ ತೆರಿಗೆಯ ಉಪ ಆಯುಕ್ತ ಹಸೀಬುಲ್ಲಾ ಬೇಗ್ ನೂರು ಕೋಟಿ ಕಂದಾಯ ವಸೂಲಿ ಮಾಡುವ ಮೂಲಕ ಸಾಧನೆ ಮಾಡಿದ್ದು, ಇದಕ್ಕಾಗಿ ಮುಖ್ಯಮಂತ್ರಿಗಳಿಂದ ಪ್ರಶಸಿ ಪಡೆದಿರುವುದು ನಮ್ಮ ದೊಡ್ಡಿಂದುವಾಡಿ ಗ್ರಾಮಕ್ಕೆ ಹೆಮ್ಮೆಯ ವಿಚಾರ ಎಂದು ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಫಯಾಜ್ ಹೇಳಿದ್ದಾರೆ.

ಹಸೀಬುಲ್ಲಾ ಬೇಗ್ ಅವರು ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದಲ್ಲಿ ಉಪ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು 2023- 2024ನೇ ಸಾಲಿನಲ್ಲಿ ನೂರು ಕೋಟಿಗೂ ಅಧಿಕ ಮೌಲ್ಯದ ತೆರಿಗೆ ಸಂಗ್ರಹಿಸಿದ್ದಾರೆ. ಇವರ ಕಾರ್ಯವೈಖರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಫಲಕ ಸ್ವೀಕರಿಸುವುದರ ಜತೆಗೆ ಪ್ರಶಂಸೆಗೊಳಗಾಗಿದ್ದಾರೆ. ಇದು ನಿಜಕ್ಕೂ ಗ್ರಾಮದ ನಮ್ಮೆಲ್ಲರಿಗೂ ಹೆಮ್ಮೆ ತರುವ ವಿಚಾರ ಎಂದು ಹೇಳಿಕೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ಹಸೀಬುಲ್ಲಾ ಅವರು ಮುಂದಿನ ದಿನಗಳಲ್ಲೂ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಇನ್ನಷ್ಟು ಪ್ರಶಸ್ತಿ, ಪುರಸ್ಕಾರಕ್ಕೆ ಭಾಜನವಾಗಲಿ ಎಂದು ಫಯಾಜ್ ಆಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net