ಹರಿಯಾಣದ ನಿತಿನ್ ಚಾಂಪಿಯನ್

07Jaggu7-web
ಬೆಳಗಾವಿಯಲ್ಲಿ ನಡೆದ 11ನೇ ಸತೀಶ್ ಶುಗರ್ಸ್ ಕ್ಲಾಸಿಕ್ ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಾಂಪಿಯನ್ ಆದ ಹರಿಯಾಣದ ನಿತಿನ್ ಚಾಂಡಿಲಾ.
Published on

ಬೆಳಗಾವಿ: ಇಲ್ಲಿ ಶುಕ್ರವಾರ ಏರ್ಪಡಿಸಿದ್ದ 11ನೇ ಸತೀಶ್ ಶುಗರ್ಸ್ ಕ್ಲಾಸಿಕ್ ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಹರಿಯಾಣದ ನಿತಿನ್ ಚಾಂಡಿಲಾ ಅವರು ಚಾಂಪಿಯನ್ ಪಟ್ಟ ಅಲಂಕರಿಸಿ, 3.55 ಲಕ್ಷ ರೂ. ನಗದು ಬಹುಮಾನ ಪಡೆದರು. 1ನೇ ರನ್ನರ್-ಅಪ್ ಹಾಗೂ ಬೆಸ್ಟ್ ಪೋಸರ್ ಆಗಿ ಮಹಾರಾಷ್ಟ್ರದ ಎನ್. ಸರಬೋಸಿಂಗ್ (1.75 ಲಕ್ಷ ರೂ. ನಗದು) ಹಾಗೂ 2ನೇ ರನ್ನರ್ ಅಪ್ ಆಗಿ ಕರ್ನಾಟಕದ ಧನರಾಜ್ (1 ಲಕ್ಷ ರೂ. ನಗದು) ಪ್ರಶಸ್ತಿ ಪಡೆದರು. ಮಹಾರಾಷ್ಟ್ರದ ತಂಡ ಟೀಮ್ ಚಾಂಪಿಯನ್ ಪಟ್ಟ ಪಡೆಯಿತು. ವಿವಿಧ ವಿಭಾಗಗಳ ಐವರು ವಿಜೇತರಿಗೂ ನಗದು ಬಹುಮಾನ ನೀಡಲಾಯಿತು.

ಫಲಿತಾಂಶಗಳು: (ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ, 4 ಹಾಗೂ 5ನೇ ಸ್ಥಾನ): 55 ಕೆಜಿ ವಿಭಾಗ: ಮಹಾರಾಷ್ಟ್ರದ ಸಂತೋಷ ಬಾವರ್ ಯಾದವ್, ತಮಿಳುನಾಡಿನ ಆರ್.ಗೋಪಾಲಕೃಷ್ಣ ಮಹಾರಾಷ್ಟ್ರದ ಅರುಣ ಪಾಟೀಲ, ಮಹಾರಾಷ್ಟ್ರದ ರಮೇಶ ಕೃಷ್ಣ ಜಾಧವ, ಉತ್ತರಪ್ರದೇಶದ ಜಿತೇಂದ್ರಸಿಂಗ್. 60 ಕೆಜಿ ವಿಭಾಗ: ಮಹಾರಾಷ್ಟ್ರದ ನಿತಿನ್ ಮಾತ್ರೆ, ಮಹಾರಾಷ್ಟ್ರದ ಅವಿನಾಶ ಪಾಟೀಲ, ಪಶ್ಚಿಮಬಂಗಾಳನ ವಾಸ್ಕರ್ ಮಂಡೋಲಾ, ತಮಿಳುನಾಡಿನ ವಿಗ್ನೇಶ, ಗೋವಾದ ರಜತ್ ಕರಾಪುರಕರ. 65 ಕೆಜಿ ವಿಭಾಗ: ಅಸ್ಸಾಂನ ಕಾಸಿರ್‌ಅಲಿ, ಮಹಾರಾಷ್ಟ್ರದ ಬಾಪನ್ ನಕುಲದಾದ್, ಬೋರ್ಡಾದ ವೈಭವ್ ಮಹಾಜನ, ತಮಿಳುನಾಡಿನ ಜಯಪ್ರಕಾಶ ತಂಗದುರೆ, ಕರ್ನಾಟಕದ ಆರ್.ಆಕಾಶ. 70 ಕೆಜಿ ವಿಭಾಗ: ಮಹಾರಾಷ್ಟ್ರದ ಪಂಚಾಕ್ಷರಿ ಲೋನಾರ, ರೈಲ್ವೆ ಪ್ರಚಾರ ಬೋರ್ಡಿನ ಪ್ರತೀಕ ಪಂಚಾಲ, ಕರ್ನಾಟಕದ ಪ್ರತಾಪ ಕಲಕುಂದ್ರಿಕರ, ಆಂಧ್ರಪ್ರದೇಶ ಜಿ. ಬಾಸ್ಕರ್ ರಾವ್, ತೆಲಂಗಾಣದ ಮೊಹಮ್ಮದ್ ಖಲೀದ್. 75 ಕೆಜಿ ವಿಭಾಗ: ರೈಲ್ವೆ ಕ್ರೀಡೆ ಪ್ರಚಾರ ಬೋರ್ಡ್‌ನ ರಕ್ಷಿತ್ ಕೋಟೆನ್, ಕರ್ನಾಟಕದ ಆರ್. ಶಶಿಕಾಂತ, ರೈಲ್ವೆ ಕ್ರೀಡೆ ಪ್ರಚಾರ ಬೋರ್ಡ್‌ನ್ ಟಿ. ರಾಮಕೃಷ್ಣ, ಪಂಜಾಬಿನ ಹ್ಯಾಪಿ, ಪಂಚಿನ ಬಂಗಾಲ ಬಿಸ್ವಾಜಿತ್ ತಾಪಾ. 80 ಕೆಜಿ ವಿಭಾಗ: ಕರ್ನಾಟಕದ ಧನರಾಜ್, ರೈಲ್ವೆ ಕ್ರೀಡೆ ಪ್ರಚಾರ ಬೋರ್ಡ್ ಚಿಂದಾ ರಾಹುಲ್, ಕರ್ನಾಟಕದ ಪ್ರಶಾಂತ ಕನ್ನೂಕರ, ತಮಿಳುನಾಡಿನ ಎನ್. ಪಾಂಡಿಯನ್, ಮಹಾರಾಷ್ಟ್ರದ ರೋಹನ ದೂರಿ. 85 ಕೆಜಿ ವಿಭಾಗ: ರೈಲ್ವೆ ಕ್ರೀಡೆ ಪ್ರಚಾರ ಬೋರ್ಡ್‌ನ ಎನ್.ಸರ್ಬೋ ಸಿಂಗ್, ಮಹಾರಾಷ್ಟ್ರದ ಅಸತೋಷ ಸಹಾ, ತಮಿಳುನಾಡಿನ ಸರ್ವನನ್ ಮನಿ, ಪಶ್ಚಿಮಬಂಗಾಳದ ಡೆಲಬೆಲ್ ಮಲ್ಲಿಕ್, ಕೇರಳದ ಅಕ್ಷಯ ಕೃಷ್ಣಾ. 90 ಕೆಜಿ ವಿಭಾಗ: ಕರ್ನಾಟಕದ ಎಸ್.ಮಂಜುನಾಥ, ಉತ್ತರ ಪ್ರದೇಶ ದೇವೇಂದ್ರಪಾಲ್, ಮಹಾರಾಷ್ಟ್ರದ ಚೇತನ ನಾಯಿಕ್, ತಮಿಳುನಾಡಿನ ಷನ್ಮುಗೇಷ, ಕರ್ನಾಟಕದ ಗೌತಮ್. 90-100 ಕೆಜಿ ವಿಭಾಗ: ಕೇಂದ್ರ ಸಾಂಸ್ಕೃತಿಕ ಬೋರ್ಡಿನ ಆರ್. ಕಾರ್ತಿಕೇಶ್ವರ, ಜಾರ್ಖಂಡಿನ ಪ್ರಶಾಂತ ಕುಮಾರ ಸಿಂಗ್, ಮಧ್ಯಪ್ರದೇಶದ ಪ್ರದೀಪ ಠಾಗೂರು, ಕರ್ನಾಟಕ ಅಶವಂತ ಸುಜಾನ್, ಮಹಾರಾಷ್ಟ್ರದ ನೀಲಕಂಠ ಸವಾಸೆ. 100 ಕೆಜಿ ವಿಭಾಗ: ಹರಿಯಾಣದ ನಿತಿನ್ ಚಾಂಡಿಲಾ, ಮಹಾರಾಷ್ಟ್ರದ ನೀಲೇಶ ದಗಾಡೆ, ರೈಲ್ವೆ ಕ್ರೀಡೆ ಪ್ರಚಾರ ಬೋರ್ಡ್‌ನ ವಿ.ಜೈಕುಮಾರ, ಯುಪಿಯ ಮನೋಜ ಅಗ್ನಿಹೋತ್ರಿ, ಮಧ್ಯಪ್ರದೇಶ ಅನಮೋಲ್ ತಿವಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net