

ಕವಿತಾಳ: ಸಮೀಪದ ಪಾಮನಕಲ್ಲೂರು ಗ್ರಾಪಂ ವ್ಯಾಪ್ತಿಯ ಹರ್ವಾಪುರ ಆರೋಗ್ಯ ಮತ್ತು ಕ್ಷೇಮ ಕೆಂದ್ರದ ದುರಸ್ತಿ ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:ಕಳಪೆ ಕಾಮಗಾರಿ ಸಹಿಸಲ್ಲ
ಹರ್ವಾಪುರ ಆರೋಗ್ಯ ಕೇಂದ್ರದ ದುರಸ್ತಿ ಕಾಮಗಾರಿಗೆ ನಾಲ್ಕು ಲಕ್ಷ ರೂ. ಖರ್ಚು ಮಾಡಲಾಗಿದೆ. ಗುತ್ತಿಗೆದಾರರು ಬಾಗಿಲು ದುರಸ್ತಿ, ಕಟ್ಟಡ ಬಣ್ಣ ಬಳಿಯುವುದು, ಛಾವಣಿ ಸೋರದಂತೆ ಮಾಡಬೇಕಾಗಿತ್ತು. ಆದರೆ, ಬಾಗಿಲು ಸರಿಯಾಗಿಲ್ಲ. ಶೌಚಾಲಯ ದುರಸ್ತಿ ಮಾಡಿಲ್ಲ, ಕಟ್ಟಡಕ್ಕೆ ಬಣ್ಣ ಸುಣ್ಣ ಬಳಿದಿಲ್ಲ. ಸಾಮಗ್ರಿ ಲೆಕ್ಕಪತ್ರ ಕೊಡುತ್ತಿಲ್ಲ. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಅಧಿಕಾರಿಗಳಿಗೆ ಹೇಳಿದರೆ ಅದರ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಮಹಿಳಾ ಮಹಾಶಕ್ತಿ ಸಂಸ್ಥಾಪಕ ಅಧ್ಯಕ್ಷೆ ವಿಜಯರಾಣಿ ಹಾಗೂ ಇತರರು ಆರೋಪಿಸಿದ್ದಾರೆ.
ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಶರಣಬಸವ ಅವರು ಮಾತನಾಡಿ, ಕಾಮಗಾರಿ ಸರಿಯಾಗಿ ಮಾಡದೆ ನಿರ್ಲಕ್ಷೃ ವಹಿಸದರೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.