ಕೆರೆಯಂಗಳದಲ್ಲಿದ್ದ ಮರಗಳ ಕಟಾವು

Untitled-1
ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಬಳಿ ಪೊಲೀಸ್​ ಪೇದೆ ಮನೆ ಮುಂಭಾಗದಲ್ಲಿ ಸಂಗ್ರಹಿಸಿಟ್ಟ ಮರದ ತುಂಡುಗಳು.
Published on

ನೆಲಮಂಗಲ : ಕೆರೆಯಂಗಳದಲ್ಲಿ ಲಾಂತರ ಬೆಲೆ ಬಾಳು ಬೃಹತ್​ ಗ್ರಾಮದ ಮರಗಳನ್ನು ಆಕ್ರಮವಾಗಿ ಕಟಾವು ಮಾಡಿ ಪೊಲೀಸ್​ ಸಿಬ್ಬಂದಿಯೊಬ್ಬರ ಮನೆಯಲ್ಲಿ ಸಂಗ್ರಹಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಸೋಲದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಗುರುವನಹಳ್ಳಿಯ ಕೆರೆಯಂಗಳದ ಬೃಹತ್​ ಗಾತ್ರದ ಮರಗಳನ್ನು ಅಕ್ರಮವಾಗಿ ಕಟಾವು ಮಾಡಿ, ಟ್ರಾ$್ಯಕ್ಟರ್​ ಮೂಲಕ ಯಂಟಗಾನಹಳ್ಳಿಯ ಪೊಲೀಸ್​ ಸಿಬ್ಬಂದಿ ಶಿವಕುಮಾರ್​ ಮನೆ ಬಳಿ ಸಂಗ್ರಹಿಸಿಟ್ಟಿದ್ದು, ಈ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

ದಿಢೀರ್​ ದಾಳಿ ನಡೆಸಿದ ಅರಣ್ಯ ಅಧಿಕಾರಿಗಳು ಪೊಲೀಸ್​ ಸಿಬ್ಬಂದಿ ಶಿವಕುಮಾರ್​ ಅವರನ್ನು ಪ್ರಶ್ನಿಸಿದ್ದು, ನಮ್ಮ ಸ್ನೇಹಿತರು ತಂದು ಹಾಕಿದ್ದಾರೆ ಎಂದು ವಿವರಣೆ ನೀಡಿದ್ದಾರೆ. ಮರಗಳನ್ನು ಕಟಾವು ಮಾಡಿರುವ ಸ್ಥಳಕ್ಕೆ ಅರಣ್ಯಾಧಿಕಾರಿಗಳು ತೆರಳಿ ಪರಿಶೀಲಿಸಿದಾಗ ಅಕ್ರಮವಾಗಿ ಮರಗಳನ್ನು ಕಟಾವು ಮಾಡಿರುವುದು ಗೊತ್ತಾಗಿದೆ. ಬಳಿಕ ಪೊಲೀಸ್​ ಸಿಬ್ಬಂದಿ ಶಿವಕುಮಾರ್​ ಸೇರಿ ಸ್ನೇಹಿತ ಲಕ್ಷ$್ಮಣ್​ ಗಂಗರಾಜು, ಲಕ್ಷಿ$್ಮನಾರಾಯಣ್​ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೆರೆ ಅಂಗಳದಲ್ಲಿ ಮರಗಳ ಮಾರಣಹೋಮ ನಡೆದಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಮೌನವಹಿಸಿದ್ದಾರೆ.

ಸಿಬ್ಬಂದಿ ರಕ್ಷಣೆಗೆ ಕಸರತ್ತು : ಅಕ್ರಮವಾಗಿ ಮರಗಳನ್ನು ಕಡಿದು ಸಂಗ್ರಹಿಸಿಟ್ಟ ಪ್ರಕರಣದಲ್ಲಿ ಪೊಲೀಸ್​ ಶಿವಕುಮಾರ್​ ಭಾಗಿಯಾದ ಕಾರಣ ಅರಣ್ಯ&ಪೊಲೀಸ್​ ಇಲಾಖೆ ಇಬ್ಬರೂ ಖಾಕಿಗಳೇ ಆಗಿರುವುದರಿಂದ ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳಬೇಕು ಎಂದು ಮಾತನಾಡಿರುವ ಆಡಿಯೋ ವೈರಲ್​ ಆಗಿದ್ದು, ಪ್ರಕರಣ ಮುಚ್ಚಿಹಾಕಿ ಪೊಲೀಸ್​ ಸಿಬ್ಬಂದಿ ರಕ್ಷಣೆ ಮಾಡಲು ಅರಣ್ಯ ಇಲಾಖೆ ಅಧಿಕಾರಿ ಕಸರತ್ತು ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅಕ್ರಮವಾಗಿ ಕಟಾವು ಮಾಡಿದ್ದ ಮರಗಳನ್ನು ವಶಕ್ಕೆ ಪಡೆಯಲಾಗಿದೆ. ಯಾರ ರಕ್ಷಣೆಗೂ ನಾವು ನಿಂತಿಲ್ಲ. ಕಾನೂನು ಬಾಹಿರವಾಗಿ ಮರ ಕಟಾವು ಮಾಡಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. > ಮಂಜುನಾಥ್​ ವಲಯ ಅರಣ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net