ಬಿಜಿಎಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಸುಗ್ಗಿ ಹಬ್ಬ

19spt12
ಗೌಡಳ್ಳಿ ಬಿ.ಜಿ.ಎಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಸುಗ್ಗಿ ಹಬ್ಬ ಆಚರಿಸಲಾಯಿತು.
Published on

ಸೋಮವಾರಪೇಟೆ: ತಾಲೂಕಿನ ಗೌಡಳ್ಳಿ ಬಿ.ಜಿ.ಎಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಇತ್ತೀಚೆಗೆ ಸುಗ್ಗಿ ಹಬ್ಬ ಆಚರಿಸಲಾಯಿತು.

ರೈತರ ಕೃಷಿ ಬದುಕನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಅರ್ಥೈಸಲು, ಎತ್ತಿನ ಗಾಡಿ, ಎತ್ತುಗಳು, ಹುಲ್ಲಿನ ಮೆದೆಯ ಮಾದರಿ, ಒಕ್ಕಲುತನ ಮಾಡಲು ಬಳಸುವ ಸಲಕರಣೆಗಳನ್ನು ಇಟ್ಟು, ಭತ್ತ, ರಾಗಿ, ಮುಂತಾದ ಧಾನ್ಯಗಳಿಗೆ ಪೂಜೆ ಸಲ್ಲಿಸಲಾಯಿತು.

ಮಕ್ಕಳು ಗಾಳಿಪಟ ಹಾರಿಸಿ ಸಂಭ್ರಮಿಸಿದರು. ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಮುಖ್ಯ ಶಿಕ್ಷಕಿ ರತ್ನಮ್ಮ, ಮುಖ್ಯಶಿಕ್ಷಕ ಆನಂದಪ್ಪ ಕಾರ್ಯಕ್ರಮದಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net