ಯಲ್ಲಾಪುರದಲ್ಲಿ ಸುಗ್ಗಿಯ ಸಂಭ್ರಮ

Ylp suggi
Published on

ಯಲ್ಲಾಪುರ: ತಾಲೂಕಿನಲ್ಲಿ ಸುಗ್ಗಿಯ ಸಂಭ್ರಮ ಮನೆ ಮಾಡಿದೆ. ಗ್ರಾಮೀಣ ಭಾಗಗಳಲ್ಲಿ ಸುಗ್ಗಿಯ ತಂಡಗಳು ಮನೆ ಮನೆಗೆ ತೆರಳಿ ಸುಗ್ಗಿ ಕುಣಿತ ಪ್ರದರ್ಶಿಸಿ ಗಮನ ಸೆಳೆಯುತ್ತಿವೆ.

ನಂದೊಳ್ಳಿ ಸಮೀಪದ ಕೊಲ್ಲಕ್ಕಿಪಾಲ ಸುಗ್ಗಿ ತಂಡ ಸೋಮವಾರ ರಾತ್ರಿಯಿಂದ ಸುಗ್ಗಿ ಕುಣಿತ ಆರಂಭಿಸಿದೆ. ತಂಡದ ಕಲಾವಿದರು ರಾತ್ರಿಯಿಡಿ ಮಾಗೋಡ, ನಂದೊಳ್ಳಿ ಸುತ್ತಮುತ್ತಲಿನ ಮನೆಗಳಿಗೆ ತೆರಳಿ ಕೋಲಾಟದ ಮೂಲಕ ಸುಗ್ಗಿ ಕುಣಿತ ಪ್ರದರ್ಶಿಸುತ್ತಿದ್ದಾರೆ.

ವರ್ಷವಿಡೀ ಕೃಷಿ, ಕೂಲಿ ಸೇರಿದಂತೆ ಬೇರೆ ಬೇರೆ ಉದ್ಯೋಗಗಳಲ್ಲಿ ನಿರತರಾಗಿರುವ ಈ ತಂಡದ ಕಲಾವಿದರು, ಸುಗ್ಗಿಯ ಸಂದರ್ಭದಲ್ಲಿ ಸುಗ್ಗಿ ಕುಣಿತದ ಮೂಲಕ ಸಂಭ್ರಮಿಸುತ್ತಾರೆ.

ಕೊಲ್ಲಕ್ಕಿಪಾಲಿನ ದೇವೇಂದ್ರ ನಾಯ್ಕ ಅವರ ನೇತೃತ್ವದ ತಂಡದಲ್ಲಿ ಹಿರಿಯರು, ಯುವಕರು ವಯಸ್ಸಿನ ಬೇಧವಿಲ್ಲದೆ ಉತ್ಸಾಹದಿಂದ ನೃತ್ಯದಲ್ಲಿ ಭಾಗವಹಿಸುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net