

ಬೆಲಹೊಂಗಲ: ಹಾರುಗೊಪ್ಪ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂದ ಆಡಳಿತ ಮಂಡಳಿಗೆ ಭಾನುವಾರ ಚುನಾವಣೆ ಜರುಗಿತು.
ಸಾಲಗಾರ ೇತ್ರದ ಸಾಮಾನ್ಯ ವರ್ಗದಿಂದ ಸಣ್ಣಮಾಯಪ್ಪ ದಾಸನಾಳ, ಸಿದ್ದಪ್ಪ ಕುಲಗೋಡ, ಶಿವಾನಂದಯ್ಯ ಕಲ್ಮಠ, ಸಿದ್ಧಪ್ಪ ಈರಣ್ಣವರ, ವೀರಭದ್ರ ಚಚಡಿ, ಸಾಲಗಾರ ಅ ವರ್ಗದಿಂದ ಶಿವಪ್ಪ ಜಕ್ಕಾನಟ್ಟಿ, ಸಾಲಗಾರರಲ್ಲದ ೇತ್ರದಿಂದ ಸಿದ್ದಪ್ಪ ಪೂಜೇರಿ, ಬ ವರ್ಗದಿಂದ ಬಸವರಾಜ ಪಟ್ಟಣ, ಸಾಮನ್ಯ ಮಹಿಳಾ ೇತ್ರದಿಂದ ಶಿವಲೀಲಾ ದಂಡಿನ, ಬಸವ್ವ ತಿಪ್ಪನ್ನವರ, ಎಸ್ಸಿ ೇತ್ರದಿಂದ ಕೀರಪ್ಪ ಹರಿಜನ, ಎಸ್ಟಿ ೇತ್ರದಿಂದ ವೀರಭದ್ರಪ್ಪ ತಳವಾರ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ರಾಕೇಶ ಗೋವನಕೊಪ್ಪ ಕಾರ್ಯನಿರ್ವಹಿಸಿದರು. ಆಯ್ಕೆಯಾದ ಸದಸ್ಯರು ಪರಸ್ಪರ ಗುಲಾಲು ಎರಚಿ ಸಂಭ್ರಮಿಸಿದರು.