ಹರ್ತಿ ಬಸವೇಶ್ವರ ಜಾತ್ರಾ ಮಹೋತ್ಸವ ನಾಳೆಯಿಂದ

HARTI BASAVANNA JATRE
Published on

ಮುಳಗುಂದ: ಸಮೀಪದ ಹರ್ತಿ ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಸೆ. 2 ಮತ್ತು 3ರಂದು ಅದ್ದೂರಿಯಾಗಿ ನಡೆಯಲಿದೆ. ಸೆ. 2ರಂದು ಬೆಳಗ್ಗೆ 7ಕ್ಕೆ ಬಸವಣ್ಣ ದೇವರಿಗೆ ಅಭಿಷೇಕ, ಅರ್ಚನೆ ಬಳಿಕ ಸಾರ್ವಜನಿಕರಿಗೆ ದರ್ಶನ, ಸೇವಾ ಕಾರ್ಯ ನಡೆಯಲಿವೆ. ಬೆಳಗ್ಗೆ 9.30ಕ್ಕೆ ಮಾಜಿ ಶಾಸಕ ಡಿ.ಆರ್. ಪಾಟೀಲ ಜಾತ್ರಾ ಮಹೋತ್ಸವ ಉದ್ಘಾಟಿಸುವರು. ಸಾನ್ನಿಧ್ಯ ಹೊಸಳ್ಳಿಯ ಅಭಿನವ ಬೂದೀಶ್ವರ ಸ್ವಾಮೀಜಿ ಹಾಗೂ ಉದ್ಘಾಟನೆ ವೀರಭದ್ರದೇವರ ಅಗ್ನಿಪ್ರವೇಶ ಕಾರ್ಯಕ್ರಮ, ಮಹಾದಾಸೋಹ, ಸಂಜೆ 4ಕ್ಕೆ ಗ್ರಾಮದೇವತೆಗೆ ಉಡಿ ತುಂಬುವುದು ಹಾಗೂ ಕಾಯಿ ಕರ್ಪರದ ಸೇವಾಕಾರ್ಯ, ಜಾಂಜ್ ಮೇಳ, ಕರಡಿ ಮಜಲು ನೆರವೇರಲಿದೆ. 5 ಗಂಟೆಗೆ ಬಸವಣ್ಣ ದೇವರ ಮಹಾರಥೋತ್ಸವವು ನಂದಿಧ್ವಜ ಪಲ್ಲಕ್ಕಿ, ಮೆರವಣಿಗೆಯೊಂದಿಗೆ ಸಂಭ್ರಮದಿಂದ ಜರುಗುಲಿದೆ. ರಾತ್ರಿ 10 ಗಂಟೆಗೆ ಮನರಂಜನಾ ಕಾರ್ಯಕ್ರಮ ನಡೆಯಲಿವೆ. ಸೆ. 3ರಂದು ಲಘು ರಥೋತ್ಸವ (ಕಡುಬಿನ ಕಾಳಗ) ಸಕಲ ವಾದ್ಯ ವೈಭವಗಳೊಂದಿಗೆ ನೆರವೇರಲಿದೆ ಎಂದು ದೇವಸ್ಥಾನದ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಬಿ.ಟಿ. ಸೋಮರಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net