

ಮುಳಗುಂದ: ಸಮೀಪದ ಹರ್ತಿ ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಶ್ರಾವಣ ಮಾಸದ ಕೊನೆಯ ಸೋಮವಾರ ಬೆಳಗ್ಗೆ 7ಗಂಟೆಗೆ ಬಸವಣ್ಣದೇವರಿಗೆ ಅಭಿಷೇಕ ಹಾಗೂ ಅರ್ಚನೆ ಕಾರ್ಯಕ್ರಮದ ನಂತರ ಸಾರ್ವಜನಿಕರಿಗೆ ದರ್ಶನ ಹಾಗೂ ಸೇವಾ ಕಾರ್ಯ, 10ಗಂಟೆಗೆ ವೀರಭದ್ರ ದೇವರ ಅಗ್ನಿಪ್ರವೇಶ ಕಾರ್ಯಕ್ರಮ, ಮಹಾದಾಸೋಹ ಹೊಸಳ್ಳಿಯ ಅಭಿನವ ಬೂದೀಶ್ವರರ ಸಾನ್ನಿಧ್ಯದಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ ಜಾತ್ರಾ ಮಹೋತ್ಸವ ಉದ್ಘಾಟಿಸಿದರು. ಸಾಯಂಕಾಲ 4ಗಂಟೆಗೆ ಗ್ರಾಮದೇವತೆಗೆ ಉಡಿ ತುಂಬುವ ಹಾಗೂ ಕಾಯಿ ಕರ್ಪೂರದ ಸೇವಾ ಕಾರ್ಯಭಜನೆ, ಜಾಂಜೋ ಮೇಳ, ಕರಡಿಮಜಲು ಮೇಳಗಳೊಂದಿಗೆ ನೆರವೇರಿತು. 5ಗಂಟೆಗೆ ಬಸವಣ್ಣ ದೇವರ ಮಹಾರಥೋತ್ಸವ ನಂದಿಧ್ವಜ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.